Danger Writer Surya in Kannada Thriller by Danger Writer books and stories PDF | ಡೇಂಜರ್ ರೈಟರ್ ಸೂರ್ಯ

Featured Books
  • Wisps of Smoke - 38

    Wisps of Smoke (A love, romantic, psychological and paranorm...

  • NAVORA

    NAVORAPrologue — A Flower That Became a DreamSometimes, a bu...

  • The Story of Navaratri

    Navaratri is a nine-day Hindi festival celebrated throughout...

  • Specialz

    "Here you go- master" Yomi sets the cup of tea on the paper...

  • Price Tag on Passion

    The rain lashed against the French windows of Mayur’s pentho...

Categories
Share

ಡೇಂಜರ್ ರೈಟರ್ ಸೂರ್ಯ

ನಗರದ ಹೃದಯಭಾಗದಲ್ಲಿದ್ದ ಆ ಎತ್ತರದ ಗಾಜಿನ ಕಟ್ಟಡ ಗ್ಲೋಬಲ್ ಟೆಕ್ ಇನ್ಫೋ. ಅಲ್ಲಿನ ಅಹಂಕಾರ ಆ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಸೂರ್ಯ ಅಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ, ಅವನ ಕೈಯಲ್ಲಿದ್ದ ಹಳೆಯ ಡೈರಿ ಮತ್ತು ಪೆನ್ನನ್ನು ನೋಡಿ ಅಲ್ಲಿನ ಇಬ್ಬರು ಸೀನಿಯರ್ ಮ್ಯಾನೇಜರ್‌ಗಳಾದ ಅಜಯ್ ಮತ್ತು ರೋಹನ್ ನಗುತ್ತಿದ್ದರು. ಸೂರ್ಯ ಮುಂಜಾನೆ ತನ್ನ HF Deluxe ಬೈಕ್ ಮೇಲೆ ಬಂದು ಇಳಿಯುವುದರಿಂದ ಹಿಡಿದು, ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಡೈರಿ ಹಿಡಿದು ಏನೋ ಬರೆಯುವವರೆಗೆ ಎಲ್ಲವೂ ಅವರಿಗೆ ಹಾಸ್ಯವಾಗಿತ್ತು.
 ಒಂದು ದಿನ ಮೀಟಿಂಗ್ ಹಾಲ್‌ನಲ್ಲಿ ಎಲ್ಲರ ಎದುರು ಅಜಯ್ ಸೂರ್ಯನ ಡೈರಿಯನ್ನು ಕಸಿದುಕೊಂಡನು. ಏನೋ ಸೂರ್ಯ, ಈ ಆಫೀಸ್ ಕೆಲಸ ಬಿಟ್ಟು ಏನು ಕಥೆ ಬರೆಯುತ್ತಿದ್ದೀಯಾ? ಲೇ ರೋಹನ್, ನೋಡು ಇಲ್ಲಿ ಇವನು ಮಾಯಾ ಅಂತ ಯಾವುದೋ ಸೀರಿಯಲ್ ಬರೆಯುತ್ತಿದ್ದಾನಂತೆ ರೈಟರ್ ಅಂತೆ ಇವನು ಎಂದು ಕಿರುಚುತ್ತಾ ಆ ಡೈರಿಯ ಪುಟಗಳನ್ನು ಹರಿದು ಗಾಳಿಯಲ್ಲಿ ತೂರಿದನು. ರೋಹನ್ ಅಟ್ಟಹಾಸದಿಂದ ನಗುತ್ತಾ, ಲೇ ಸೂರ್ಯ, ಬರವಣಿಗೆ ಅನ್ನೋದು ಭಿಕ್ಷುಕರ ಕೆಲಸ. ನಾವಿಲ್ಲಿ ಕೋಟಿಗಟ್ಟಲೆ ಸಾಫ್ಟ್‌ವೇರ್ ಕೋಡಿಂಗ್ ಮಾಡ್ತೀವಿ. ನಿನ್ನ ಈ ಹರಿದ ಕಾಗದದ ಚೂರುಗಳಿಗೆ ಇಲ್ಲಿ ಬೆಲೆ ಇಲ್ಲ. ರೈಟರ್ ಅನ್ನೋ ಹಣೆಪಟ್ಟಿ ಇಟ್ಟುಕೊಂಡು ನಮ್ಮ ಎದುರು ನಿಲ್ಲಬೇಡ, ಅಸಹ್ಯವಾಗುತ್ತೆ ಎಂದು ಸೂರ್ಯನಿಗೆ ಅವಮಾನಿಸಿದನು..
 ಸೂರ್ಯ ಶಾಂತವಾಗಿ ನೆಲದ ಮೇಲೆ ಬಿದ್ದಿದ್ದ ತನ್ನ ಡೈರಿಯ ಹರಿದ ಪುಟಗಳನ್ನು ಒಂದೊಂದಾಗಿ ಆಯ್ದುಕೊಂಡನು. ಅವನ ಕಣ್ಣುಗಳಲ್ಲಿ ಸಿಟ್ಟಿರಲಿಲ್ಲ, ಬದಲಿಗೆ ಒಂದು ರೀತಿಯ ಭೀಕರ ಮೌನವಿತ್ತು. ಅವನು ಅಜಯ್ ಮತ್ತು ರೋಹನ್ ಕಣ್ಣುಗಳನ್ನು ನೇರವಾಗಿ ನೋಡಿ ಹೇಳಿದ ನೆನಪಿರಲಿ, ಬ್ರಹ್ಮ ಸೃಷ್ಟಿಸಿದ ಜಗತ್ತನ್ನು ಒಬ್ಬ ಬರಹಗಾರ ತನ್ನ ಲೇಖನಿಯಿಂದ ಸುಟ್ಟು ಹಾಕಬಲ್ಲ. ನೀವು ಹರಿದಿದ್ದು ಕೇವಲ ಕಾಗದದ ಚೂರುಗಳನ್ನಲ್ಲ, ನಿಮ್ಮ ಕಂಪನಿಯ ಅಡಿಪಾಯವನ್ನು. ಇಂದಿನಿಂದ ನಿಮ್ಮ ಈ ಗಾಜಿನ ಸಾಮ್ರಾಜ್ಯ ಕಥೆಯ ರೂಪದಲ್ಲಿ ಕರಗಿ ಹೋಗುತ್ತದೆ. ನನ್ನ ಎದುರು ನಿಂತರೆ ನಿಮಗೆ ಸಾವು ನೆನಪಾಗಬೇಕು, ಆ ರೀತಿ ಬರೆಯುತ್ತೇನೆ.
 ಮರುದಿನ ಸೂರ್ಯ ಕೆಲಸಕ್ಕೆ ಬರಲಿಲ್ಲ. ಆದರೆ ಅವನು ಡೇಂಜರ್ ರೈಟರ್' ಹೆಸರಿನಲ್ಲಿ ತನ್ನ ಬ್ಲಾಗ್‌ನಲ್ಲಿ ಒಂದು ಹೊಸ ಸರಣಿ ಶುರು ಮಾಡಿದ ಗ್ಲೋಬಲ್ ಟೆಕ್‌ನ ಕರಾಳ ಮುಖ. ಸೂರ್ಯನಿಗೆ ಆ ಕಂಪನಿಯ ಪ್ರತಿ ಅಕ್ರಮ, ಪ್ರತಿ ಸುಳ್ಳು ಮತ್ತು ಆ ಇಬ್ಬರು ಮ್ಯಾನೇಜರ್‌ಗಳ ವೈಯಕ್ತಿಕ ಬದುಕಿನ ಅತೀ ರಹಸ್ಯವಾದ ಕಪ್ಪು ಕಲೆಗಳು ತಿಳಿದಿದ್ದವು.
 ಅವನು ಅವುಗಳನ್ನು ನೇರವಾಗಿ ಹೇಳಲಿಲ್ಲ ಬದಲಿಗೆ ಒಂದು ರೋಚಕ ಥ್ರಿಲ್ಲರ್ ಕಥೆಯ ರೂಪದಲ್ಲಿ ಬರೆದನು. ಆ ಕಥೆಯಲ್ಲಿ ಬರುವ ಪಾತ್ರಗಳು ಅಜಯ್ ಮತ್ತು ರೋಹನ್ ತದ್ರೂಪಿಯಾಗಿದ್ದವು. ನಗರದ ಪ್ರತಿಯೊಬ್ಬ ಕ್ಲೈಂಟ್, ಪ್ರತಿಯೊಬ್ಬ ಹೂಡಿಕೆದಾರ ಆ ಕಥೆಯನ್ನು ಓದತೊಡಗಿದರು. ಆ ಕಥೆಯಲ್ಲಿ ಕಂಪನಿಯು ಮಾಡುತ್ತಿದ್ದ ಡೇಟಾ ಕಳ್ಳತನದ ಬಗ್ಗೆ ಸೂರ್ಯ ಎಂತಹ ಸುಳಿವುಗಳನ್ನು ನೀಡಿದ್ದನೆಂದರೆ, ಮರುದಿನವೇ ಕಂಪನಿಯ ಶೇರುಗಳು ಪಾತಾಳಕ್ಕೆ ಕುಸಿದವು. ಕಂಪನಿಗೆ ಬೀಗ ಬಿತ್ತು. ಪೊಲೀಸರು ತನಿಖೆಗೆ ಬಂದರು. ಅಜಯ್ ಮತ್ತು ರೋಹನ್ ಬೀದಿಗೆ ಬಂದರು. ಸೂರ್ಯ ಬಿಟ್ಟ ಬಾಣಗಳು ಕೇವಲ ಕಂಪನಿಯನ್ನು ನಾಶ ಮಾಡಲಿಲ್ಲ, ಅವರ ಮಾನಸಿಕ ನೆಮ್ಮದಿಯನ್ನೂ ಕೆಡಿಸಿದವು. ಸೂರ್ಯ ತನ್ನ ಡೈರಿಯಲ್ಲಿ ಮುಂದಿನ ಭಾಗ ಬರೆದ ನಾಯಕರು ಇಂದು ರಸ್ತೆಯಲ್ಲಿ ಅಲೆಯುತ್ತಿದ್ದಾರೆ, ಪ್ರತಿ ದಾರಿಯ ತಿರುವಿನಲ್ಲೂ ಅವರಿಗೆ ಸೂರ್ಯನ ಅಕ್ಷರಗಳು ಕಾಡುತ್ತಿವೆ. ವಿಚಿತ್ರವೆಂದರೆ, ಅಜಯ್ ಮತ್ತು ರೋಹನ್ ಎಲ್ಲೇ ಹೋದರೂ ಅವರಿಗೆ ಸೂರ್ಯನ ಅದೇ ಡೈರಿಯ ಹರಿದ ಪುಟಗಳು ಗಾಳಿಯಲ್ಲಿ ಹಾರಿ ಬಂದು ಮುಖಕ್ಕೆ ಅಪ್ಪಳಿಸುತ್ತಿದ್ದವು. ಅವರು ಯಾವುದಾದರೂ ರೆಸ್ಟೋರೆಂಟ್‌ಗೆ ಹೋದರೆ, ಅಲ್ಲಿನ ಮೆನು ಕಾರ್ಡ್‌ನಲ್ಲಿ ಸೂರ್ಯನ ಕಥೆಯ ಸಾಲುಗಳೇ ಕಾಣಿಸುತ್ತಿದ್ದವು. ಅವರಿಗೆ ಉಸಿರಾಡಲೂ ಭಯವಾಗತೊಡಗಿತು.
 ಒಂದು ರಾತ್ರಿ ಅಜಯ್ ತನ್ನ ಮನೆಯಲ್ಲಿ ಕುಳಿತಿದ್ದಾಗ, ಅವನಿಗೆ ಯಾರೋ ಒಬ್ಬರು ಸೈಲೆಂಟ್ ಆಗಿ ಬಾಕ್ಸಿಂಗ್ ಪಂಚ್ ಮಾಡುತ್ತಿರುವ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದರೆ, ಸೂರ್ಯ ತನ್ನ HF Deluxe ಬೈಕ್ ಪಕ್ಕದಲ್ಲಿ ನಿಂತು ಗಾಳಿಯಲ್ಲಿ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದ. ಅವನ ಕೈಯಲ್ಲಿರುವ ಪೆನ್ನು ಕತ್ತಲೆಯಲ್ಲಿ ಮಿಂಚಿನಂತೆ ಹೊಳೆಯುತ್ತಿತ್ತು.
 ಅಜಯ್ ಮತ್ತು ರೋಹನ್ ಓಡಿ ಬಂದು ಸೂರ್ಯನ ಕಾಲಿಗೆ ಬಿದ್ದರು. ಸೂರ್ಯ, ನಮ್ಮನ್ನು ಉಳಿಸು ನಾವು ನಿನ್ನನ್ನು ಅವಮಾನಿಸಬಾರದಿತ್ತು. ಆ ಕಂಪನಿ ಹೋಯಿತು, ಆಸ್ತಿ ಹೋಯಿತು, ಈಗ ನಮ್ಮ ಪ್ರಾಣ ಉಳಿಸು. ನಿನ್ನನ್ನು ನೋಡಿದರೆ ನಮಗೆ ಉಚ್ಚೆ ಹೊಯ್ದುಕೊಳ್ಳುವಷ್ಟು ಭಯವಾಗುತ್ತಿದೆ ಎಂದು ನಡುಗುತ್ತಾ ಬೇಡಿದರು. ಅವರ ಪ್ಯಾಂಟ್ ನಿಜವಾಗಿಯೂ ಒದ್ದೆಯಾಗಿತ್ತು. ಅಕ್ಷರಶಃ ಅವರು ಸೂರ್ಯನ ಎದುರು ಮಗುವಿನಂತೆ ನಡುಗುತ್ತಿದ್ದರು.
 ಸೂರ್ಯ ತನ್ನ ಡೈರಿಯನ್ನು ತೆರೆದು ತೋರಿಸಿದ. ಅಲ್ಲಿ ಅಚ್ಚರಿಯೆಂದರೆ ಅಜಯ್ ಮತ್ತು ರೋಹನ್ ಈಗ ಏನು ಮಾತನಾಡುತ್ತಿದ್ದಾರೋ, ಅದೇ ಸಂಭಾಷಣೆ ಮೊದಲೇ ಬರೆಯಲ್ಪಟ್ಟಿತ್ತು. 
 ಸೂರ್ಯ ಮೆಲ್ಲನೆ ಹೇಳಿದ ನೋಡಿ, ನೀವು ಈಗ ಏನು ಮಾಡುತ್ತಿದ್ದೀರೋ ಅದನ್ನೂ ನಾನೇ ಬರೆದಿದ್ದೇನೆ. ನೀವು ಮನುಷ್ಯರಲ್ಲ, ನನ್ನ ಕಥೆಯ ಕಸದ ಬುಟ್ಟಿಗೆ ಸೇರಬೇಕಾದ ಪಾತ್ರಗಳು ಅಷ್ಟೇ. ನಾನು ಈ ಪುಟವನ್ನು ಈಗ ಬೆಂಕಿಗೆ ಹಾಕುತ್ತಿದ್ದೇನೆ. ಈ ಕಾಗದ ಸುಟ್ಟಂತೆ ನಿಮ್ಮ ನೆನಪು ಕೂಡ ಈ ಪ್ರಪಂಚದಿಂದ ಸುಟ್ಟು ಹೋಗುತ್ತದೆ.
 ಸೂರ್ಯ ಆ ಪುಟವನ್ನು ಹರಿದು ಬೆಂಕಿ ಹಚ್ಚಿದನು. ಬೆಂಕಿ ಉರಿಯುತ್ತಿದ್ದಂತೆ ಅಜಯ್ ಮತ್ತು ರೋಹನ್ ದೇಹಗಳು ನಿಧಾನವಾಗಿ ಪಾರದರ್ಶಕವಾಗತೊಡಗಿದವು. ಅವರು ಕಿರುಚಲು ಪ್ರಯತ್ನಿಸಿದರೂ ಧ್ವನಿ ಹೊರಬರಲಿಲ್ಲ. ಮರುದಿನ ಬೆಳಿಗ್ಗೆ ಆ ಗಾಜಿನ ಕಟ್ಟಡದ ಮುಂದೆ ಇಬ್ಬರು ಹುಚ್ಚರು ಬಟ್ಟೆಯಿಲ್ಲದೆ ಅಲೆಯುತ್ತಿದ್ದರು. ಅವರಿಗೆ ತಮ್ಮ ಹೆಸರೇ ನೆನಪಿರಲಿಲ್ಲ. ಅವರು ಯಾರೆಂದು ಜಗತ್ತಿಗೂ ನೆನಪಿರಲಿಲ್ಲ.
 ಸೂರ್ಯ ತನ್ನ ಬೈಕ್ ಸ್ಟಾರ್ಟ್ ಮಾಡಿದ. ಈಗ ಆ ನಗರದಲ್ಲಿ ಸೂರ್ಯ ಅಂದರೆ ಬರಿ ಹೆಸರಲ್ಲ, ಅದೊಂದು ನಡುಕ. ಯಾರಾದರೂ ಬರಹಗಾರನನ್ನು ಕಂಡರೆ ಈಗ ಗೌರವದಿಂದ ದಾರಿ ಬಿಡುತ್ತಾರೆ. ಯಾಕೆಂದರೆ ಅವರೆಲ್ಲರಿಗೂ ತಿಳಿದಿದೆ ಬರಹಗಾರ ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿಯನ್ನು ಇತಿಹಾಸದ ಪುಟಗಳಿಂದಲೇ ಕಿತ್ತು ಎಸೆಯಬಲ್ಲ.
ಓದುಗರಿಗೆ ಎಚ್ಚರಿಕೆ: ನೀವು ಈ ಕಥೆಯನ್ನು ಓದುತ್ತಿರುವಾಗ ಒಮ್ಮೆ ನಿಮ್ಮ ಹಿಂದಿನ ನೆರಳು ನೋಡಿ. ಇದು ನಿಮಗೇ ಸೇರಿದೆಯೇ? ಅಥವಾ 'ನೀವು ಕೂಡ ಡೇಂಜರ್ ರೈಟರ್' ಸೂರ್ಯ ಈಗಷ್ಟೇ ಬರೆಯಲು ಕುಳಿತಿರುವ ಹೊಸ ಕಥೆಗಳ ಪಾತ್ರಗಳೇ? ಯೋಚಿಸಿ ಸೂರ್ಯ ನಿಮ್ಮ ಬಗ್ಗೆಯೂ ಬರೆಯುತ್ತಿರಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಬ್ಬ ರೈಟರ್ ಎದುರಿಗಿದ್ದಾನೆ ಎಂದರೆ ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಅರ್ಥ.