Pranam 2 - 3 in Kannada Spiritual Stories by Sandeep Joshi books and stories PDF | ಪ್ರಣಂ 2 - 3

Featured Books
Categories
Share

ಪ್ರಣಂ 2 - 3

​ಗುರುಜಿಯವರನ್ನು ಭೇಟಿಯಾದ ನಂತರ, ಆರ್ಯನ್ ಮತ್ತು ಅನುಗೆ ತಮ್ಮ ಮುಂದಿನ ದಾರಿ ಸ್ಪಷ್ಟವಾಗಿತ್ತು. ಅವರು ತಮ್ಮ ಯೋಜನೆ 'ಪ್ರಣಂ 2' ಪ್ರಾಜೆಕ್ಟ್‌ನ ಕೆಲಸಗಳನ್ನು ಮತ್ತಷ್ಟು ವೇಗಗೊಳಿಸಲು ನಿರ್ಧರಿಸಿದರು. ಏಕೆಂದರೆ ಈ ಪ್ರಾಜೆಕ್ಟ್‌ನ ಮೂಲಕವೇ ಅವರು ತಮ್ಮ ಹಿಂದಿನ ಜನ್ಮದ ಪಾತ್ರಗಳನ್ನು ಹಾಗೂ ರಹಸ್ಯಗಳನ್ನು ಬಿಚ್ಚಿಡಲು ಪ್ರಯತ್ನಿಸುತ್ತಿದ್ದರು.

​ಅದೇ ಸಮಯದಲ್ಲಿ, ಆರ್ಯನ್ ಮತ್ತು ಅನು ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಕ್ರಮ್‌ಗೆ ಕೋಪವನ್ನು ತರಿಸಿತು. ಅವನು ತನ್ನ ಕಚೇರಿಯಲ್ಲಿ ಕೋಪದಿಂದ ನನ್ನ ಹಳೆಯ ಶತ್ರುಗಳು ಮತ್ತೆ ಒಂದಾಗುತ್ತಿದ್ದಾರೆ, ಇವರನ್ನು ಬೇಗನೆ ದೂರ ಮಾಡಬೇಕು, ಎಂದು ಹೇಳಿಕೊಂಡನು. ವಿಕ್ರಮ್‌ ತನ್ನ ಬಳಿ ಇರುವ ರಹಸ್ಯ ತಂತ್ರಜ್ಞಾನವನ್ನು ಬಳಸಿ ಆರ್ಯನ ಕಂಪನಿಯ ಪ್ರಾಜೆಕ್ಟ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದನು. ವಿಕ್ರಮ್‌ಗೆ, ಇದು ಕೇವಲ ಒಂದು ಪ್ರಾಜೆಕ್ಟ್ ಅನ್ನು ಹಾಳು ಮಾಡುವುದಾಗಿರಲಿಲ್ಲ, ಆದರೆ ಆರ್ಯನ ಜೀವನವನ್ನು ನಾಶ ಮಾಡುವುದಾಗಿತ್ತು.

ಒಂದು ದಿನ, ಆರ್ಯನ್ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ, ಕಂಪ್ಯೂಟರ್‌ಗಳೆಲ್ಲವೂ ದಿಢೀರನೇ ಸ್ಥಗಿತಗೊಂಡವು. ಆರ್ಯನ್ ತಂಡಕ್ಕೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ವಿಕ್ರಮ್‌ ಹ್ಯಾಕ್ ಮಾಡಿದ್ದಾನೆ ಎಂದು ತಿಳಿದ ತಕ್ಷಣ ಆರ್ಯನು ಎಚ್ಚರಗೊಂಡನು. ಅವನು ಕಂಪ್ಯೂಟರ್ ಪರದೆಯ ಮೇಲೆ ನಿಮ್ಮ ಕನಸುಗಳಿಗೆ ಒಂದು ತಿರುವು ಕೊಡಿ, ಇಲ್ಲದಿದ್ದರೆ ನಿಮ್ಮ ಕನಸುಗಳು ನನಸಾಗುವುದಿಲ್ಲ, ಎಂದು ಬರೆದಿರುವುದನ್ನು ಕಂಡನು. ಆರ್ಯನ್ ಗೆ ಇದು ವಿಕ್ರಮ್‌ ನ ಕಡೆಯಿಂದ ಬಂದ ಸಂದೇಶ ಎಂದು ತಿಳಿಯಿತು.

​ಅದೇ ಸಮಯದಲ್ಲಿ, ದೂರದ ದೇವಸ್ಥಾನವೊಂದರಲ್ಲಿ, ಗುರುಜಿಯವರು ಆರ್ಯನ್ ಗೆ ಏನೋ ತೊಂದರೆ ಆಗಿದೆ ಎಂದು ಅರಿತುಕೊಂಡರು. ಅವರು ಆರ್ಯನ್  ತೊಂದರೆಗೆ ಸಿಕ್ಕಿದ್ದಾನೆಂದು ಅನುಗೆ ಕರೆ ಮಾಡಿ ಹೇಳಿದರು. ಅನು ತಕ್ಷಣ ಆರ್ಯನ್ ಬಳಿ ಓಡಿ ಹೋದಳು. ಆರ್ಯನ್ ಕಂಪನಿಯಲ್ಲಿ ಅನು ಇದ್ದಾಗ, ಅವಳು ಆ ಕಂಪ್ಯೂಟರ್‌ಗಳ ಮೇಲಿನ ಸಂಕೇತಗಳನ್ನು ಗುರುತಿಸಿದಳು. ಅವು ಹಿಂದಿನ ಕಾಲದ ಯಾವುದೋ ಅಜ್ಞಾತ ಭಾಷೆಗೆ ಸಂಬಂಧಿಸಿದ್ದವು. ಆರ್ಯನ್ ಗೆ ತಾನೊಬ್ಬ ವಿಜ್ಞಾನಿ ಆಗಿದ್ದರೂ ಇಂತಹ ತಂತ್ರಜ್ಞಾನವನ್ನು ಹೇಗೆ ಹ್ಯಾಕ್ ಮಾಡಲು ಸಾಧ್ಯವಾಯಿತೆಂದು ಗೊಂದಲವಾಯಿತು. ಈ ಹ್ಯಾಕ್ ಸಾಮಾನ್ಯ ಹ್ಯಾಕ್ ಅಲ್ಲ ಎಂದು ಅನುಗೆ ಅನ್ನಿಸಿತು. ಅನು ಆ ಸಂಕೇತಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿದಳು, ಆದರೆ ಆ ಸಂಕೇತಗಳನ್ನು ಓದಲು ಅವರಿಗೆ ಸಾಧ್ಯವಾಗಲಿಲ್ಲ. ಆರ್ಯನ್ ಈ ಸಮಸ್ಯೆಯನ್ನು ಪರಿಹರಿಸಲು ತನ್ನದೇ ತಂತ್ರಜ್ಞಾನವನ್ನು ಬಳಸಿದರೂ, ಅದಕ್ಕೆ ಪರಿಹಾರ ಸಿಗಲಿಲ್ಲ. ಈ ಸಂದರ್ಭದಲ್ಲಿ, ಆರ್ಯನ್ ಗೆ ತನ್ನ ಮತ್ತೊಂದು ಪಾತ್ರವಾದ ಜೀವನ್‌ನ ಬಗ್ಗೆ ನೆನಪಾಯಿತು. ನನ್ನ ಆತ್ಮದ ಒಂದು ಭಾಗ, ಜೀವನ್ ಎಲ್ಲಿದ್ದಾನೆ? ಈ ಸಮಸ್ಯೆಯನ್ನು ಪರಿಹರಿಸಲು ನಮಗೆ ಆತನ ಸಹಾಯ ಬೇಕು, ಎಂದು ಆರ್ಯ ಅನುಳಿಗೆ ಹೇಳಿದನು.

​ಅದೇ ಸಮಯದಲ್ಲಿ, ಒಂದು ಪತ್ರಿಕೆಯಲ್ಲಿ ಜೀವನ್‌ನ ಕುರಿತು ವರದಿಯಾಗಿತ್ತು. "ದೂರದ ಹಿಮಾಲಯದಲ್ಲಿ, ಒಬ್ಬ ಯೋಗಿಯು ತನ್ನದೇ ವೈಶಿಷ್ಟ್ಯಗಳನ್ನು ಹೊಂದಿದ್ದು, ಆತ ಅದ್ಭುತ ಶಕ್ತಿಗಳನ್ನು ಹೊಂದಿದ್ದಾನೆ ಎಂದು ವರದಿ ಹೇಳಿತ್ತು. ಆ ವರದಿಯಲ್ಲಿ, ಜೀವನ್‌ನ ಒಂದು ಫೋಟೋ ಕೂಡ ಇತ್ತು. ಆರ್ಯನು ಆ ಫೋಟೋವನ್ನು ನೋಡಿದಾಗ, ಅವನು ತಾನೇ ಆ ಪಾತ್ರದ ರೂಪದಲ್ಲಿ ಕಾಣುವುದನ್ನು ಕಂಡು ಆಶ್ಚರ್ಯಚಕಿತನಾದನು. ಅನುಳಿಗೂ ಸಹ ಆರ್ಯನ್ ಮುಖ ಹೋಲಿಕೆಯಾಯಿತು. ಆರ್ಯನಿಗೆ ತನ್ನ ಕನಸುಗಳಲ್ಲಿ ಮೂರನೇ ಪಾತ್ರದ ಬಗ್ಗೆ ತಿಳಿದಿರಲಿಲ್ಲ, ಆದರೆ ಈಗ ಆತನು ತಾನೇ ಆ ಪಾತ್ರದ ರೂಪದಲ್ಲಿ ಬೇರೆಡೆ ಇರುವನು ಎಂದು ತಿಳಿದು ಒಂದು ಕ್ಷಣ ಗೊಂದಲಕ್ಕೊಳಗಾದನು. ವಿಕ್ರಮ್‌ಗೆ ಆರ್ಯನ ಮತ್ತೊಂದು ಪಾತ್ರದ ಬಗ್ಗೆ ತಿಳಿದಿರಲಿಲ್ಲ, ಏಕೆಂದರೆ ವಿಕ್ರಮ್‌ಗೆ ಹಿಂದಿನ ಜನ್ಮದ ಕಥೆ ಮಾತ್ರ ತಿಳಿದಿತ್ತು. ಈ ಜನ್ಮದಲ್ಲಿ ಆರ್ಯನ ಆತ್ಮ ಎರಡು ಭಾಗಗಳಾಗಿ ವಿಭಜನೆಗೊಂಡಿದೆ ಎಂಬ ಸತ್ಯ ವಿಕ್ರಮ್‌ಗೆ ತಿಳಿದಿರಲಿಲ್ಲ.

ಆರ್ಯನ್ ಮತ್ತು ಅನು, ಹಿಮಾಲಯಕ್ಕೆ ಪ್ರಯಾಣಿಸಲು ಸಿದ್ಧರಾದರು. ಆರ್ಯನ್ ಗೆ, ಇದು ಕೇವಲ ಒಂದು ಪ್ರಯಾಣವಾಗಿರಲಿಲ್ಲ, ತನ್ನ ಆತ್ಮದ ಇನ್ನೊಂದು ಭಾಗವನ್ನು ಹುಡುಕುವ ಒಂದು ಯಾತ್ರೆಯಾಗಿತ್ತು. ಆರ್ಯನ್ ತನ್ನ ಕಂಪನಿಯ ವ್ಯವಹಾರಗಳನ್ನು ತನ್ನ ನಂಬಿಗಸ್ಥ ಸಿಬ್ಬಂದಿಗೆ ವಹಿಸಿ, ಅನು ಜೊತೆಗೆ ಹಿಮಾಲಯದ ಕಡೆಗೆ ಪ್ರಯಾಣ ಆರಂಭಿಸಿದನು.​ಅದೇ ಸಮಯದಲ್ಲಿ, ವಿಕ್ರಮ್‌ ತನ್ನ ಯೋಜನೆಯಲ್ಲಿ ಯಶಸ್ವಿಯಾಗಲು ಮತ್ತಷ್ಟು ಕುತಂತ್ರಗಳನ್ನು ಹೂಡಲು ಪ್ರಾರಂಭಿಸುತ್ತಾನೆ. ಆರ್ಯನ್ ಮತ್ತು ಅನು ಇಬ್ಬರೂ ಜೊತೆಯಾಗಿ ಪ್ರಾಜೆಕ್ಟ್‌ನಿಂದ ಹೊರಗಿದ್ದಾರೆ ಎಂದು ತಿಳಿದ ತಕ್ಷಣ, ಅರ್ಯನ್ ಕಂಪನಿಯ ವ್ಯವಹಾರಗಳನ್ನು ನಾಶ ಮಾಡಲು ಪ್ರಯತ್ನಿಸಿದನು. ಆದರೆ, ಆರ್ಯನ್ ತನ್ನ ಕಂಪನಿಯ ವ್ಯವಹಾರಗಳನ್ನು ಭದ್ರಪಡಿಸಿದ್ದರಿಂದ ವಿಕ್ರಮ್‌‌ನ ತಂತ್ರಗಳು ವಿಫಲವಾದವು. ವಿಕ್ರಮ್‌ ಈ ಬಾರಿ ತಂತ್ರಜ್ಞಾನದ ಬದಲಿಗೆ ತನ್ನ ಸ್ವಂತ ದ್ರೋಹದ ಶಕ್ತಿಯನ್ನು ಬಳಸಲು ನಿರ್ಧರಿಸಿದನು. ಅವನು ಹಳೆಯ ಕಾಲದ ಮಂತ್ರವಾದಿಗಳಂತೆ, ಆರ್ಯನ ಮೇಲೆ ದುಷ್ಟ ಶಕ್ತಿಗಳನ್ನು ಕಳುಹಿಸಲು ಯೋಚಿಸಿದನು. ವಿಕ್ರಮ್‌ ಕಾಲಾನಾಗನಂತೆ ದ್ವೇಷವನ್ನು, ಮೋಸವನ್ನು ಮತ್ತು ಕುತಂತ್ರವನ್ನು ಬಳಸುತ್ತಿದ್ದನು, ಆದರೆ ಅವುಗಳನ್ನು ಆಧುನಿಕ ರೂಪದಲ್ಲಿ ತೋರಿಸುತ್ತಿದ್ದನು.

​ಹಿಮಾಲಯದಲ್ಲಿ, ಆರ್ಯ ಮತ್ತು ಅನು ದೇವಸ್ಥಾನದ ಸಮೀಪದ ಕಾಡಿನೊಳಗೆ ಪ್ರವೇಶಿಸಿದರು. ಗುರುಜಿ ನೀಡಿದ್ದ ಸೂಚನೆಗಳ ಪ್ರಕಾರ, ಅವರು ಗುಹೆಯೊಂದನ್ನು ಹುಡುಕಬೇಕಿತ್ತು. ಆ ಗುಹೆಯ ಬಳಿ ತಲುಪಿದಾಗ, ಅದರ ಸುತ್ತ ನಿಗೂಢ ವಾತಾವರಣವಿತ್ತು. ಅಲ್ಲಿಯ ಪ್ರಶಾಂತತೆಯೂ ಸಹ ಭಯವನ್ನು ಹುಟ್ಟಿಸುತ್ತಿತ್ತು. ಅವರು ಗುಹೆಯೊಳಗೆ ಪ್ರವೇಶಿಸಿದಾಗ, ಅವರಿಗೆ ಯೋಗಿಯೊಬ್ಬರು ತಪಸ್ಸಿನಲ್ಲಿ ಕುಳಿತಿರುವುದು ಕಂಡಿತು. ಆ ಯೋಗಿಯ ಮುಖ ಆರ್ಯನ ಮುಖದಂತೆಯೇ ಇತ್ತು. ಅದು ಜೀವನ್ ಆಗಿದ್ದನು. ಜೀವನ್ ಕಣ್ಣುಗಳನ್ನು ತೆರೆದನು. ಅವನ ಕಣ್ಣುಗಳು ಆಳವಾದ ಜ್ಞಾನದಿಂದ ಮತ್ತು ನೋವಿನಿಂದ ತುಂಬಿದ್ದವು. ಆತನು ಆರ್ಯನ್ ನನ್ನು ನೋಡಿ, ವೀರಬಾಹು, ಇಷ್ಟು ದಿನಗಳ ನಂತರ ಬಂದೆಯಾ? ನಿನ್ನ ಆತ್ಮದ ಈ ಪಾತ್ರ ನೋಡಿ ನನಗೆ ಅಚ್ಚರಿಯಾಯಿತು. ನೀವು ನನಗೆ ಬೇಡ, ನಾನು ದ್ರೋಹ ಮತ್ತು ನೋವನ್ನು ಅನುಭವಿಸಿದವನು. ಪ್ರಪಂಚದಿಂದ ದೂರ ಇರುವ ನಿರ್ಧಾರ ತೆಗೆದುಕೊಂಡಿದ್ದೇನೆ, ಎಂದು ಹೇಳಿದನು.ಆರ್ಯನ್ ದಿಗ್ಭ್ರಮೆಗೊಂಡನು. ಜೀವನ್, ನಾನು ನಿಮ್ಮ ಇನ್ನೊಂದು ಭಾಗ. ನಾವು ಇಬ್ಬರೂ ಒಂದಾದರೆ ಮಾತ್ರ ನಾವು ನಮ್ಮ ಹಿಂದಿನ ಜನ್ಮದ ಪಾತ್ರಗಳನ್ನು ಪೂರೈಸಬಹುದು. ನಮ್ಮ ದ್ರೋಹಿಯ ವಿರುದ್ಧ ವಿಜಯ ಸಾಧಿಸಲು ನಾವು ಇಬ್ಬರೂ ಒಂದಾಗಬೇಕು, ಎಂದು ಕೇಳಿಕೊಂಡನು.ಆದರೆ, ಜೀವನ್‌ಗೆ ಹಿಂದಿನ ಜನ್ಮದ ನೋವು ಮತ್ತು ದ್ರೋಹವು ಇಷ್ಟವಿರಲಿಲ್ಲ. ಅವನು ನನಗೆ ಇದು ಬೇಡ. ನಿನ್ನ ಕಥೆ, ನಿನ್ನ ಪಾತ್ರ, ಎಲ್ಲವೂ ನಿನಗೆ ಸೇರಿದ್ದು. ನಾನು ಈ ಪ್ರಪಂಚದಿಂದ ಬೇರೆಡೆಗೆ ಹೋಗಲು ನಿರ್ಧರಿಸಿದ್ದೇನೆ ಎಂದು ದೃಢವಾಗಿ ಹೇಳಿದನು. ​ಅದೇ ಸಮಯದಲ್ಲಿ, ವಿಕ್ರಮ್‌ ಕಳುಹಿಸಿದ ದುಷ್ಟ ಶಕ್ತಿಗಳು ಆರ್ಯನ್ ಮತ್ತು ಜೀವನ್ ಇಬ್ಬರನ್ನೂ ಇರಿಯಲು ಪ್ರಯತ್ನಿಸಿದವು. ಆರ್ಯನ್ ಸಾಮಾನ್ಯ ಮನುಷ್ಯನಾಗಿದ್ದರಿಂದ, ಆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಅವನಿಗೆ ಸಾಧ್ಯವಾಗಲಿಲ್ಲ. ಆದರೆ, ಜೀವನ್ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಬಳಸಿ, ಆ ದುಷ್ಟ ಶಕ್ತಿಗಳನ್ನು ಸೋಲಿಸಲು ಪ್ರಯತ್ನಿಸುತ್ತಾನೆ. ಆದರೆ, ಒಂದು ಕ್ಷಣ ಅವನ ಶಕ್ತಿಯೂ ಕಡಿಮೆಯಾಯಿತು, ಮತ್ತು ಆ ದುಷ್ಟ ಶಕ್ತಿಗಳು ಅವರನ್ನು ಇರಿಯಲು ಬಂದವು.ಆಗ ಅನು ತಕ್ಷಣವೇ ಆರ್ಯನ್ ಗೆ ಮತ್ತು ಜೀವನ್‌ಗೆ ರಕ್ಷಣೆ ನೀಡಲು ತನ್ನ ಬಳಿ ಇದ್ದ ಪವಿತ್ರ ವಸ್ತುಗಳನ್ನು ಬಳಸಿ ಅವರನ್ನು ರಕ್ಷಿಸಿದಳು. ಆಗ, ಜೀವನ್‌ಗೆ ತಾನೊಬ್ಬ ಜ್ಞಾನಿ ಆಗಿದ್ದರೂ ಇಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಒಬ್ಬ ಮನುಷ್ಯನನ್ನು ಕಂಡು ಆಶ್ಚರ್ಯವಾಯಿತು. ನೀನು ಯಾರು?ಎಂದು ಜೀವನ್ ಅನುಳನ್ನು ಕೇಳಿದನು. ಅನು ಕೇವಲ ನಕ್ಕಳು ಮತ್ತು ನಾನು ಕೇವಲ ಒಂದು ಸಾಧನ,ಎಂದು ಹೇಳಿದಳು.​ಈ ಕ್ಷಣದಲ್ಲಿ, ಜೀವನ್‌ಗೆ ತಾನು ಈ ಪ್ರಪಂಚದಿಂದ ದೂರ ಇರಲು ಸಾಧ್ಯವಿಲ್ಲ, ಏಕೆಂದರೆ ತನ್ನ ಹಿಂದಿನ ಜನ್ಮದ ಪಾತ್ರವನ್ನು ಪೂರೈಸಲು ಆರ್ಯನಿಗೆ ಸಹಾಯ ಮಾಡಬೇಕೆಂದು ಅನ್ನಿಸಿತು. ಜೀವನ್, ಆರ್ಯನನ್ನು ನೋಡಿ ಸರಿ, ನಾನು ನಿನ್ನ ಜೊತೆ ಬರುತ್ತೇನೆ. ಆದರೆ, ನಾವು ವಿಕ್ರಮ್‌ನನ್ನು ಸೋಲಿಸಲು ದ್ವೇಷದ ಬದಲಾಗಿ ಪ್ರೀತಿಯನ್ನು ಮತ್ತು ಕ್ಷಮೆಯನ್ನು ಬಳಸಬೇಕು. ಇದು ನಮ್ಮ ಯುದ್ಧ, ಅದು ಕೇವಲ ಒಂದು ದ್ವೇಷದ ಯುದ್ಧವಲ್ಲ, ಎಂದು ಹೇಳಿದನು.

                                  ಮುಂದುವರೆಯುತ್ತದೆ