ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ಲೋಕವೇ ಆಗಿತ್ತು.ಗಡಿಯಾರ ಆರು ಗಂಟೆ ಬಾರಿಸುವಾಗಲೇ ಅವನ ಕಣ್ಣು ತೆರೆಯಿತು ಎಚ್ಚರವಾದನು, ಇನ್ನು ನಿದ್ದೆಗಣ್ಣು, ಮೈಮುರಿಯುತ್ತ ಎದ್ದನು, ಕಿಟಕಿಯ ಬಳಿಗೆ ಹೋಗಿ ಪರದೆ ಎಳೆದನು. ಹೊರಗೆ ಮುಸುಕು ಮಂಜು ಇನ್ನೂ ದಟ್ಟವಾಗಿ ಹರಡಿತ್ತು, ಆದರೆ ಅವನ ಕಣ್ಣುಗಳಿಗೆ ಮಾತ್ರ - ಆ ಸಾಮಾನ್ಯ ಮಂಜಿನ ಮುಸುಕಿನಲ್ಲಿ ಮತ್ತೊಂದು ವಿಶ್ವವೆ ತೇಲಾಡುತ್ತಿತ್ತು. ಚಿನ್ನದ ಬಣ್ಣದ್ದು. ಜೀವಂತವಾದುದು. ಸಸ್ಯಗಳ ಸುತ್ತ ಸುತ್ತುವರೆದಿತ್ತು,
ಗಿಡದ ನುಡಿ: ಪರಿಸರ ಸಿದ್ಧರ ಉಗಮ - 1
ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ಆಗಿತ್ತು.ಗಡಿಯಾರ ಆರು ಗಂಟೆ ಬಾರಿಸುವಾಗಲೇ ಅವನ ಕಣ್ಣು ತೆರೆಯಿತು ಎಚ್ಚರವಾದನು, ಇನ್ನು ನಿದ್ದೆಗಣ್ಣು, ಮೈಮುರಿಯುತ್ತ ಎದ್ದನು, ಕಿಟಕಿಯ ಬಳಿಗೆ ಹೋಗಿ ಪರದೆ ಎಳೆದನು. ಹೊರಗೆ ಮುಸುಕು ಮಂಜು ಇನ್ನೂ ದಟ್ಟವಾಗಿ ಹರಡಿತ್ತು, ಆದರೆ ಅವನ ಕಣ್ಣುಗಳಿಗೆ ಮಾತ್ರ - ಆ ಸಾಮಾನ್ಯ ಮಂಜಿನ ಮುಸುಕಿನಲ್ಲಿ ಮತ್ತೊಂದು ವಿಶ್ವವೆ ತೇಲಾಡುತ್ತಿತ್ತು. ಚಿನ್ನದ ಬಣ್ಣದ್ದು. ಜೀವಂತವಾದುದು. ಸಸ್ಯಗಳ ಸುತ್ತ ಸುತ್ತುವರೆದಿತ್ತು, ವಿವಿಧ ಬಣ್ಣಗಳ ...Read More
ಗಿಡದ ನುಡಿ: ಪರಿಸರ ಸಿದ್ಧರ ಉಗಮ - 2
ಅಧ್ಯಾಯ - 2: ಗುರುತಿಸುವಿಕೆಕಿರಣನ ಕಣ್ಣುಗಳು ನಿಧಾನವಾಗಿ ತೆರೆದುಕೊಂಡವು. ಮೊದಲಿಗೆ ಎಲ್ಲವೂ ಮಂದವಾಗಿ, ಅಸ್ಪಷ್ಟವಾಗಿ ಕಾಣಿಸಿತು. ನಂತರ ನಿಧಾನವಾಗಿ ಅರ್ಜುನನ ಚಿಂತೆಗೊಂಡ ಮುಖ ಸ್ಪಷ್ಟವಾಯಿತು."ಕಿರಣ್! ಎಚ್ಚರವಾಯಿತೇ?" ಧ್ವನಿಯಲ್ಲಿ ಪರಿಹಾರದ ನಿಟ್ಟುಸಿರು.ಕಿರಣ್ ನಿಧಾನವಾಗಿ ಕುಳಿತುಕೊಂಡನು. ತಲೆ ಸ್ವಲ್ಪ ಗಿರಗಿರುತ್ತಿತ್ತು, ಆದರೆ ಮೊದಲಿನ ಆ ಭಯಾನಕ ನೋವು ಕಣ್ಮರೆಯಾಗಿತ್ತು. "ಏನಾಯಿತು? ನನಗೆ... ನಾನೀಗ ಚೆನಾಗಿದ್ದೀನಿ" ಅವನ ಧ್ವನಿಯಲ್ಲಿ ಆಶ್ಚರ್ಯ.ಅರ್ಜುನ್ ತನ್ನ ಗೆಳೆಯನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದನು. "ನೀನು ಪ್ರಜ್ಞೆ ತಪ್ಪಿದ್ದೆ. ನಾನು... ನಾನು ನಿನಗೆ ನೀರು ಕೊಟ್ಟೆ. ಅದರಲ್ಲಿ ಕೆಲವು ಎಲೆಗಳನ್ನು ಹಿಂಡಿ ಬೆರೆಸಿದ್ದೆ.""ಎಲೆಗಳನ್ನು?" ಕಿರಣ್ ಗೊಂದಲಕ್ಕೊಳಗಾದನು. "ಯಾವ ಎಲೆಗಳನ್ನು?""ನನಗೆ ಗೊತ್ತಿಲ್ಲ." ಅರ್ಜುನನ ಧ್ವನಿ ಕ್ಷೇಣವಾಯಿತು. "ನನಗೆ ಹೇಗೆ ಗೊತ್ತಾಯಿತೋ ಅದು ನನಗೇ ಗೊತ್ತಿಲ್ಲ. ಆದರೆ... ಆದರೆ ನನಗೆ ಅನ್ನಿಸಿತು ಅದನ್ನು ಮಾಡಬೇಕೆಂದು."ಕಿರಣ್ ನಿಟ್ಟುಸಿರು ಬಿಟ್ಟು, ತನ್ನ ಪ್ರಾಯೋಗಿಕ ಮನಸ್ಸಿಗೆ ತಕ್ಕಂತೆ ವಿಶ್ಲೇಷಿಸಲು ಪ್ರಯತ್ನಿಸಿದನು. "ನೀರಿನ ಕೊರತೆಯಿಂದಾಗಿರಬೇಕು. ನೀನು ಚೆನ್ನಾಗಿ ಯೋಚಿಸಿದ್ದೀಯ, ಅರ್ಜುನ್." ಅವನು ಎದ್ದು ನಿಲ್ಲಲು ಪ್ರಯತ್ನಿಸಿದನು. "ಈಗ ಮನೆಗೆ ಹೋಗೋಣ. ...Read More
ಗಿಡದ ನುಡಿ: ಪರಿಸರ ಸಿದ್ಧರ ಉಗಮ - 3
ಅಧ್ಯಾಯ - 3: ಬಂಗಾರದ ಒಳನೋಟಶಾಲೆಯ ಗಂಟೆ ಬಾರೀಸಿತು. ಅರ್ಜುನ್ ಮತ್ತು ಕಿರಣ್ ಶಾಲೆಯ ಹೊರಗಿನ ಐಸ್ ಕ್ರೀಮ್ ಅಂಗಡಿಯ ಬಳಿ ನಿಂತಿದ್ದರು. ಶಾಂತಪ್ಪನ ಅಂಗಡಿ ಮಾಲನಾಡಿನ ಪ್ರಸಿದ್ಧ ಕುಲ್ಫಿ ಐಸ್ ಕ್ರೀಮ್‌ಗಾಗಿ ಹೆಸರಾಗಿತ್ತು."ಎರಡು ಮಾವಿನ ಕುಲ್ಫಿ," ಕಿರಣ್ ಹೇಳಿದನುಅರ್ಜುನ್ ತನ್ನ ಸ್ಕೆಚ್ ಬುಕ್ ತೆಗೆದು, ಮರದ ನೆರಳಿನಲ್ಲಿ ಕುಳಿತು ಏನನ್ನೋ ಚಿತ್ರಿಸಲಾರಂಭಿಸಿದನು. ಕಳೆದ ಎರಡು ದಿನಗಳಿಂದ ಅವನು ಚಿಂತಿತನಾಗಿದ್ದನು. ವಿಕ್ರಮನ ಆ ಕುತೂಹಲದ ನೋಟ... ಅವನಿಗೆ ಎಷ್ಟು ಗೊತ್ತಾಗಿತ್ತು?"ಏಯ್, ನಿಮಗೆ ಕಂಪನಿ ಕೊಡಬಹುದೇ?"ಅವರಿಬ್ಬರೂ ತಲೆ ಎತ್ತಿ ನೋಡಿದರು. ವಿಕ್ರಮ್ ಅಲ್ಲಿ ನಿಂತಿದ್ದನು, ಸ್ನೇಹಪೂರ್ಣ ನಗುವಿನೊಂದಿಗೆ. ಅವನ ಕೈಯಲ್ಲಿ ಬ್ಯಾಡ್ಮಿಂಟನ್ ರಾಕೆಟ್ - ಅವನು ಆಟದಿಂದ ಬಂದಿರಬೇಕು."ವಿಕ್ರಮ್ ಅಣ್ಣ!" ಕಿರಣ್ ಆಶ್ಚರ್ಯದಿಂದ ಹೇಳಿದನು. "ಹೌದು, ಖಂಡಿತ!"ವಿಕ್ರಮ್ ಅವರ ಪಕ್ಕ ಕುಳಿತುಕೊಂಡನು. ಅರ್ಜುನ್ ಸ್ವಲ್ಪ ಉದ್ವಿಗ್ನನಾದನು, ಆದರೆ ವಿಕ್ರಮನ ನಡವಳಿಕೆ ತುಂಬಾ ಸಹಜವಾಗಿತ್ತು. ಆ ದಿನದ ಘಟನೆಯ ಬಗ್ಗೆ ಯಾವುದೇ ಮಾತಿರಲಿಲ್ಲ."ಶಾಂತಪ್ಪ, ಒಂದು ಬಾದಾಮ್ ಕುಲ್ಫಿ," ವಿಕ್ರಮ್ ಕೇಳಿದನು, ನಂತರ ಅರ್ಜುನನತ್ತ ...Read More