ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ಕೃಷ್ಣನ ಫೋನ್‌ಗೆ ಒಂದು ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂತು. ಅದರಲ್ಲಿ ಕೇವಲ ಹಾಯ್ ಎಂದು ಇತ್ತು. ಕೃಷ್ಣ ಯಾರಿರಬಹುದೆಂದು ಯೋಚಿಸುತ್ತಿರುವಾಗ, ಎರಡನೇ ಮೆಸೇಜ್ ಬಂತು: ಸಾರಿ, ನೀವು ನರೇಶ್ ಅಲ್ವಾ? ಕೃಷ್ಣ ಗೊಂದಲಗೊಂಡು, ಇಲ್ಲ, ನೀವು ತಪ್ಪಾದ ನಂಬರ್‌ಗೆ ಮೆಸೇಜ್ ಮಾಡಿದ್ದೀರಿ ಎಂದು ಉತ್ತರಿಸಿದ.ಕ್ಷಣಾರ್ಧದಲ್ಲಿ ಉತ್ತರ ಬಂತು: ಓಹ್, ಕ್ಷಮಿಸಿ. ನಿಮ್ಮ ನಂಬರ್ ನೋಡಿದಾಗ ನನ್ನ ಹಳೆಯ ಸ್ನೇಹಿತ ನರೇಶ್‌ರ ನೆನಪಾಯಿತು. ನಾವಿಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಅವಳ ಮಾತಿನಲ್ಲಿ ಒಂದು ರೀತಿಯ ನಿಷ್ಕಲ್ಮಶತೆ ಇತ್ತು, ಹಾಗಾಗಿ ಕೃಷ್ಣ, ಪರವಾಗಿಲ್ಲ, ನನ್ನ ಹೆಸರು ಕೃಷ್ಣ ಎಂದು ಹೇಳಿದ. ಆ ನಂತರ ಅವಳು ತನ್ನನ್ನು ತಾನು ಅನು ಎಂದು ಪರಿಚಯಿಸಿಕೊಂಡಳು.
ಕಾಣದ ಗರ್ಲ್ ಫ್ರೆಂಡ್ - 1
ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ಫೋನ್‌ಗೆ ಒಂದು ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂತು. ಅದರಲ್ಲಿ ಕೇವಲ ಹಾಯ್ ಎಂದು ಇತ್ತು. ಕೃಷ್ಣ ಯಾರಿರಬಹುದೆಂದು ಯೋಚಿಸುತ್ತಿರುವಾಗ, ಎರಡನೇ ಮೆಸೇಜ್ ಬಂತು: ಸಾರಿ, ನೀವು ನರೇಶ್ ಅಲ್ವಾ? ಕೃಷ್ಣ ಗೊಂದಲಗೊಂಡು, ಇಲ್ಲ, ನೀವು ತಪ್ಪಾದ ನಂಬರ್‌ಗೆ ಮೆಸೇಜ್ ಮಾಡಿದ್ದೀರಿ ಎಂದು ಉತ್ತರಿಸಿದ.ಕ್ಷಣಾರ್ಧದಲ್ಲಿ ಉತ್ತರ ಬಂತು: ಓಹ್, ಕ್ಷಮಿಸಿ. ನಿಮ್ಮ ನಂಬರ್ ನೋಡಿದಾಗ ನನ್ನ ಹಳೆಯ ಸ್ನೇಹಿತ ನರೇಶ್‌ರ ನೆನಪಾಯಿತು. ನಾವಿಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಅವಳ ಮಾತಿನಲ್ಲಿ ಒಂದು ರೀತಿಯ ನಿಷ್ಕಲ್ಮಶತೆ ಇತ್ತು, ಹಾಗಾಗಿ ಕೃಷ್ಣ, ಪರವಾಗಿಲ್ಲ, ನನ್ನ ಹೆಸರು ಕೃಷ್ಣ ಎಂದು ಹೇಳಿದ. ಆ ನಂತರ ಅವಳು ತನ್ನನ್ನು ತಾನು ಅನು ಎಂದು ಪರಿಚಯಿಸಿಕೊಂಡಳು. ಆ ಕ್ಷಣದಿಂದ ಇಬ್ಬರ ನಡುವೆ ಮಾತುಕತೆ ಶುರುವಾಯಿತು.ಅವಳ ಮೆಸೇಜ್‌ಗಳಲ್ಲಿ ಒಂದು ರೀತಿಯ ಮ್ಯಾಜಿಕ್ ಇತ್ತು. ...Read More
ಕಾಣದ ಗರ್ಲ್ ಫ್ರೆಂಡ್ - 2
ಅನು, ನನಗೆ ಸತ್ಯ ಹೇಳು. ನೀನು ಬೇರೆಯವರನ್ನು ಮದುವೆ ಆಗುತ್ತಾ ಇದಿಯಾ? ಹಾಗಾದರೆ ನಮ್ಮಿಬ್ಬರ ಪ್ರೀತಿ ಏನು? ಕೃಷ್ಣನ ಈ ಪ್ರಶ್ನೆಯಿಂದ ಅನು ಒಂದೆರಡು ನಿಮಿಷ ಅವಳ ಈ ಮೌನ ಕೃಷ್ಣನನ್ನು ಇನ್ನಷ್ಟು ಕಾಡಿತು. ಅವನ ಹೃದಯ ಅಷ್ಟೇ ವೇಗದಲ್ಲಿ ಬಡಿದುಕೊಳ್ಳುತ್ತಿತ್ತು. ಕಡೆಗೂ ಅವಳು ಉತ್ತರಿಸಿದಳು. ಅವಳ ಉತ್ತರ ಕೃಷ್ಣನ ನಿರೀಕ್ಷೆಯ ಎಲ್ಲೆ ಮೀರಿತ್ತು.ಕೃಷ್ಣ, ನೀನು ತುಂಬಾ ಹತಾಶನಾಗಿದ್ದೀಯಾ, ನನಗೆ ಗೊತ್ತಿದೆ. ನನ್ನ ಮದುವೆಯ ಬಗ್ಗೆ ನಿನಗೆ ತಿಳಿದಿರುವ ಸತ್ಯ ಅರ್ಧ ಮಾತ್ರ. ನಾನು ಬೇರೆಯವನನ್ನು ಮದುವೆಯಾಗಿರುವುದು ನಿಜ. ಆದರೆ, ನನ್ನ ಬದುಕು ನನಗೆ ಇಷ್ಟವಿಲ್ಲದ ರೀತಿ ತಿರುವು ಪಡೆದಿದೆ. ಅವಳ ಮಾತುಗಳು ಗೊಂದಲಮಯವಾಗಿದ್ದವು. ಕೃಷ್ಣ ತಕ್ಷಣ, ಅನು, ಏನು ನಡೆಯುತ್ತಿದೆ? ದಯವಿಟ್ಟು ಎಲ್ಲವನ್ನೂ ವಿವರವಾಗಿ ಹೇಳು, ಎಂದು ಕೇಳಿದ.ನಾನು ಚಿಕ್ಕವಳಿದ್ದಾಗಲಿಂದಲೂ ನನ್ನ ಅಣ್ಣ ಲೋಫರ್. ಅವನಿಗೆ ಹಣ ಮತ್ತು ಅಧಿಕಾರವೇ ಮುಖ್ಯ. ನಮ್ಮ ಕುಟುಂಬದ ಹೆಸರು ಅಥವಾ ನಮ್ಮ ಭಾವನೆಗಳು ಅವನಿಗೆ ಮುಖ್ಯವಲ್ಲ. ಆತ ನನ್ನನ್ನು ಮದುವೆ ಮಾಡಲು ...Read More
ಕಾಣದ ಗರ್ಲ್ ಫ್ರೆಂಡ್ - 3
ಅನು ಹೇಳಿದ ಕಥೆಯನ್ನು ಕೇಳಿದ ಮೇಲೆ ಕೃಷ್ಣನ ಮನಸ್ಸು ಭಾರವಾಯಿತು. ಅವಳ ಅಣ್ಣನ ಕ್ರೌರ್ಯ, ಅವಳ ಗಂಡನ ಸಾವು, ಮತ್ತು ಅದರ ನಂತರವೂ ನನ್ನ ಜೊತೆಗಿನ ಇದೆಲ್ಲವೂ ಅವನಿಗೆ ಅವಳ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅವಳ ಕಷ್ಟದ ಸಮಯದಲ್ಲಿ ನಾನು ಅವಳ ಜೊತೆ ಇರಬೇಕು ಎಂದು ನಿರ್ಧರಿಸಿದ. ಆದರೆ ಅವನ ಮನಸ್ಸಿನಲ್ಲಿ ಒಂದಿಷ್ಟು ಅನುಮಾನಗಳು ಉಳಿದಿದ್ದವು. ಅವಳು ಯಾಕೆ ನನ್ನನ್ನು ಭೇಟಿ ಮಾಡಲು ನಿರಾಕರಿಸುತ್ತಿದ್ದಳು? ಅವಳು ತನ್ನ ಗಂಡನ ಸಾವಿಗೆ ,ಅವಳ ಅಣ್ಣ ಕಾರಣನಾಗಿರಬಹುದೇ? ಅಥವಾ ಅವಳಿಗೆ ಇನ್ನೂ ಏನಾದರೂ ನೋವಿದೆಯೇ?ಕೃಷ್ಣ ತನ್ನ ಗೆಳೆಯ ರವಿಯ ಬಳಿ ಈ ಕಥೆಯನ್ನು ಹೇಳಿದ. ರವಿ, ಕೃಷ್ಣ, ನೀನು ತುಂಬಾ ಸುಲಭವಾಗಿ ಅವಳನ್ನು ನಂಬುತ್ತಿದ್ದೀಯಾ. ಅವಳು ನಿನಗೆ ಒಂದು ಪ್ರೊಫೈಲ್ ಪಿಕ್ಚರ್ ಕೂಡ ಕಳಿಸಿಲ್ಲ. ನೀನು ಅವಳನ್ನು ನೋಡಿಲ್ಲ, ಅವಳ ಕುಟುಂಬದವರನ್ನು ನೋಡಿಲ್ಲ. ಇದೆಲ್ಲಾ ಒಂದು ದೊಡ್ಡ ಸುಳ್ಳು ಇರಬಹುದು. ನೀನು ಜಾಗರೂಕನಾಗಿರು ಎಂದು ಸಲಹೆ ನೀಡಿದನು.ರವಿಯ ಮಾತುಗಳು ಅವನ ಮನಸ್ಸಿನಲ್ಲಿ ...Read More