ಮಂಗಳೂರಿನ ಹೊರವಲಯದಲ್ಲಿರುವ ಆ ರಹಸ್ಯ ಲ್ಯಾಬೊರೇಟರಿ. ಹೊರಗಡೆ ಮಳೆಗಾಲದ ರಾತ್ರಿ, ಮಿಂಚು ಗುಡುಗುಗಳ ಶಬ್ದದ ನಡುವೆ ಡಾ. ಗಗನ್ ಒಬ್ಬನೇ ಕುಳಿತು ತನ್ನ ಸಂಶೋಧನೆಯಲ್ಲಿ ಮುಳುಗಿದ್ದ. ಮನುಷ್ಯನ ರಕ್ತದ ಕಣಗಳಲ್ಲಿರುವ ಡಿಎನ್‌ಎ ಅನ್ನು ತಿದ್ದುಪಡಿ ಮಾಡಿ, ಗುಣಪಡಿಸಲಾಗದ ಕಾಯಿಲೆಗಳನ್ನು ಗುಣಪಡಿಸುವುದು ಅವನ ಗುರಿಯಾಗಿತ್ತು. ಅವನ ಮುಂದೆ ಇದ್ದ ಮೈಕ್ರೋಸ್ಕೋಪ್‌ನ ಪರದೆಯ ಮೇಲೆ ರಕ್ತದ ಸ್ಯಾಂಪಲ್ ವಿಚಿತ್ರವಾಗಿ ವರ್ತಿಸುತ್ತಿತ್ತು.ಸಾಮಾನ್ಯವಾಗಿ DNA ಎಂದರೆ ಸುರುಳಿಯಾಕಾರದ ರಚನೆ. ಆದರೆ, ಆ ಸ್ಯಾಂಪಲ್‌ನಲ್ಲಿ ಇದ್ದದ್ದು ಡಿಜಿಟಲ್ ಕೋಡ್‌ಗಳ ಸಾಲುಗಳು. ಅವನು ತನ್ನ ಲ್ಯಾಬ್ ಕಂಪ್ಯೂಟರ್‌ಗೆ ಆ ಸ್ಯಾಂಪಲ್ ಅನ್ನು ಕನೆಕ್ಟ್ ಮಾಡಿದಾಗ, ಕಂಪ್ಯೂಟರ್‌ನ ಸ್ಕ್ರೀನ್ ಬಿಳಿಬಣ್ಣದ ದೀಪದಂತೆ ಹೊಳೆಯಿತು. ಪರದೆಯ ಮೇಲೆ ವೇಗವಾಗಿ ಬೈನರಿ ಕೋಡ್‌ಗಳು ಓಡತೊಡಗಿದವು. ಗಗನ್ ಆಶ್ಚರ್ಯದಿಂದ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವನ ಕೈ ನಡುಗಿತು. ಆ ಕೋಡ್‌ನ ಪ್ರತಿ ಸಾಲಿನಲ್ಲೂ GAGAN_V.1.0_BETA ಎಂಬ ಹೆಸರು ಎದ್ದು ಕಾಣುತ್ತಿತ್ತು. ಅವನ ದೇಹ, ಅವನ ರಕ್ತ, ಅವನ ಅಸ್ತಿತ್ವ ಎಲ್ಲವೂ ಒಂದು ಬೃಹತ್ ಕಂಪ್ಯೂಟರ್ ಪ್ರೋಗ್ರಾಂನ