ಮಿ.ಈಗೋ

  • 1.1k
  • 393

ಉಡುಪಿಯ ಆ ಮಧ್ಯಾಹ್ನದ ಬಿಸಿಲು ಎಷ್ಟಿತ್ತೆಂದರೆ, ರಸ್ತೆಯ ಮೇಲೆ ನಡೆದಾಡುವ ಪ್ರತಿಯೊಬ್ಬ ವ್ಯಕ್ತಿಯ ನೆರಳು ಕೂಡ ಬಿಸಿಗೆ ಬೇಸತ್ತು ಅವರ ಕಾಲಿನ ಕೆಳಗೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿತ್ತು. ಇಂತಹ ಬೇಸಿಗೆಯಲ್ಲೂ ನಮ್ಮ ಕಥೆಯ ನಾಯಕ ಈಶ್ವರ್ ಗೌಡ ಅಲಿಯಾಸ್ ಈಗೋ ತನ್ನ ಕೆಂಪು ಬಣ್ಣದ ಸ್ಕೂಟರ್ ಏರಿ ಅತ್ಯಂತ ಸ್ಟೈಲಿಶ್ ಆಗಿ ಹೋಗುತ್ತಿದ್ದ. ಈಶ್ವರ್‌ಗೆ ತನ್ನ ಮೇಲೆ ತನಗಿರುವ ನಂಬಿಕೆ ಎಂಥದ್ದು ಎಂದರೆ, ಒಮ್ಮೆ ದಾರಿಯಲ್ಲಿ ಹೋಗುವಾಗ ನಾಯಿಯೊಂದು ಇವನನ್ನು ನೋಡಿ ಬೊಗಳಿದರೆ, ಇವನು ಗಾಡಿ ನಿಲ್ಲಿಸಿ ಆ ನಾಯಿಯ ಕಣ್ಣಲ್ಲಿ ಕಣ್ಣಿಟ್ಟು ನಿನಗೆ ನನ್ನ ಪವರ್ ಏನು ಅಂತ ಗೊತ್ತಿಲ್ಲ, ಸುಮ್ಮನೆ ಬಾಯಿ ಮುಚ್ಚು ಎಂದು ಅದಕ್ಕೂ ಈಗೋ ತೋರಿಸುವ ವ್ಯಕ್ತಿ. ಇವನ ಪ್ರಕಾರ, ಈ ಜಗತ್ತಿನಲ್ಲಿ ಎರಡು ತರಹದ ಮನುಷ್ಯರಿದ್ದಾರೆ ಒಂದು ಈಶ್ವರ್ ಗೌಡ, ಇನ್ನೊಂದು ತಪ್ಪು ಮಾಡುವವರು.ಆದರೆ ಅಂದು ಈಶ್ವರ್ ಕೈಯಲ್ಲೊಂದು ವಿಚಿತ್ರವಾದ ಪಾರ್ಸೆಲ್ ಇತ್ತು. ಅದರ ಮೇಲೆ ಅಕ್ಷರಗಳು ರಕ್ತದ ಬಣ್ಣದಲ್ಲಿ ಬರೆಯಲ್ಪಟ್ಟಿದ್ದವು ಜಾಗ್ರತೆ ಈ ಪಾರ್ಸೆಲ್