ಶಿಫ್ಟ್ -00:00: ಶೂನ್ಯದ ಡೆಲಿವರಿ

  • 51

ಮಂಗಳೂರಿನ ಆ ರಾತ್ರಿ ಎಂದಿನಂತಿರಲಿಲ್ಲ. ಮಳೆ ಸುರಿಯುತ್ತಿರಲಿಲ್ಲ, ಆದರೆ ಗಾಳಿಯಲ್ಲಿ ಒಂದು ತೇವಾಂಶವಿತ್ತು. ಅದು ಮನುಷ್ಯನ ಬೆವರಿನಂತೆ ಜಿಗುಟಾಗಿತ್ತು. ಸಂದೀಪ್ ತನ್ನ RTRT ಬೈಕ್ ಮೇಲೆ ಕುಳಿತು ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ. ರಾತ್ರಿ ಹನ್ನೊಂದು ಗಂಟೆ ಐವತ್ತೊಂಬತ್ತು ನಿಮಿಷ. ಇಡೀ ದಿನ ಡೆಲಿವರಿ ಮಾಡಿ ಅವನ ಮೈ ಕೈ ನೋಯುತ್ತಿದ್ದವು. ಇನ್ನೇನು ಆ್ಯಪ್ ಆಫ್ ಮಾಡಿ ಮನೆಗೆ ಹೋಗಿ ಮಲಗಬೇಕು, ಆ ಅಸಡ್ಡೆಯ ಜಗತ್ತಿನಿಂದ ದೂರಾಗಬೇಕು ಅಂದುಕೊಳ್ಳುತ್ತಿದ್ದಾಗಲೇ ಅವನ ಫೋನ್ ವಿಚಿತ್ರವಾಗಿ ವೈಬ್ರೇಟ್ ಆಗಲು ಶುರು ಮಾಡಿತು.ಅದು ಆ್ಯಪ್‌ನ ನೋಟಿಫಿಕೇಶನ್ ಅಲ್ಲ, ಬದಲಾಗಿ ಯಾರೋ ಫೋನ್ ಅನ್ನು ಒಳಗಿನಿಂದ ಚುಚ್ಚಿದಂತೆ ಸದ್ದು ಕೇಳಿಸಿತು. ಸ್ಕ್ರೀನ್ ಮೇಲೆ ಒಂದು ವಾಟ್ಸಾಪ್ ಮೆಸೇಜ್ ಮೂಡಿತು. ಕಳುಹಿಸಿದವರು ಅನಿರ್ಬಾನ್ ಚಟರ್ಜಿ. ಮೆಸೇಜ್: ಹಸಿದಿದ್ದೇನೆ ಸಂದೀಪ್. ಪಾರ್ಸೆಲ್ ನಿನ್ನ ಬೈಕ್ ಬಾಕ್ಸ್‌ನಲ್ಲಿದೆ. ವಿಳಾಸ: ಹೈವೆ ರಸ್ತೆ ಬರುವ ಕಾಡಿನ ಮಧ್ಯೆ ಇರುವ ಆ ಕೈಬಿಟ್ಟ ಮರಳು ಗಣಿ.ಸಂದೀಪ್‌ಗೆ ತಲೆ ಗಿರ್ ಎನ್ನತೊಡಗಿತು. ನಾನು ಯಾವುದೇ ಹೋಟೆಲ್‌ಗೆ ಹೋಗಿಲ್ಲ, ಆರ್ಡರ್