ಬೆಂಗಳೂರಿನ ಅತ್ಯಾಧುನಿಕ ಓಮಿನಿ ಪ್ರೈಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹತ್ತನೇ ಮಹಡಿಯಲ್ಲಿ 'ಡಾ. ಅನಿಕೇತ್ ತನ್ನ ಐಷಾರಾಮಿ ಕ್ಯಾಬಿನ್‌ನಲ್ಲಿ ಕುಳಿತಿದ್ದ. ಅವನು ಜಗತ್ತಿನ ಪ್ರಸಿದ್ಧ ಪ್ಲಾಸ್ಟಿಕ್ ಮತ್ತು ಓರಲ್ ಸರ್ಜನ್. ಅವನ ಕೈಚಳಕ ಎಂತಹದ್ದೆಂದರೆ, ಮುಖದ ವಿನ್ಯಾಸವನ್ನೇ ಬದಲಿಸಿ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗದಂತೆ ಮಾಡಬಲ್ಲ ಚತುರ. ಆದರೆ, ಅನಿಕೇತ್‌ನಿಗೆ ಹಣದ ಮೇಲಿದ್ದ ವ್ಯಾಮೋಹ ಅವನ ವೈದ್ಯಕೀಯ ವೃತ್ತಿಗಿಂತ ದೊಡ್ಡದಾಗಿತ್ತು. ಒಂದು ಕರಾಳ ರಾತ್ರಿ, ಮಳೆ ಅಬ್ಬರಿಸುತ್ತಿದ್ದಾಗ, ಅವನ ಬಳಿಗೆ ಕಪ್ಪು ಮುಸುಕು ಧರಿಸಿದ ಒಬ್ಬ ವ್ಯಕ್ತಿ ಬಂದ. ಅವನ ಹೆಸರು ಶೆಟ್ಟಿ ಅಂತರಾಷ್ಟ್ರೀಯ ಸ್ಮಗ್ಲಿಂಗ್ ಲೋಕದ ದೊರೆ.ಶೆಟ್ಟಿ ಟೇಬಲ್ ಮೇಲೆ ಒಂದು ಸಣ್ಣ ಪೆಟ್ಟಿಗೆಯನ್ನಿಟ್ಟ. ಅದರ ಒಳಗಿದ್ದದ್ದು ಬ್ಲೂ ಹಾರ್ಟ್ ಎಂಬ ಹೆಸರಿನ ಅತ್ಯಂತ ಅಪರೂಪದ ನೀಲಿ ವಜ್ರ. ಅದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಐನೂರು ಕೋಟಿ ರೂಪಾಯಿ. ಶೆಟ್ಟಿಯ ಬೇಡಿಕೆ ವಿಚಿತ್ರವಾಗಿತ್ತು ಡಾಕ್ಟರೇ, ಈ ವಜ್ರವನ್ನು ನನ್ನ ನಾಲಿಗೆಯ ಕೆಳಗೆ ಸರ್ಜರಿ ಮಾಡಿ ಅಳವಡಿಸಬೇಕು. ಇದು ಯಾರಿಗೂ ಕಾಣಬಾರದು, ಸ್ಕ್ಯಾನರ್