(ನಾರಾಯಣ ಮತ್ತು ಎಲ್ಲರು ಊರಿಗೆ ಬಂದರು, ನಾರಾಯಣ ಹಳ್ಳಿಯ ದಾರಿಯಲ್ಲಿ ಸಾಗುತ್ತಾ, ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಾ ಹೋಗುತ್ತಿದ್ದ, ಶೌರ್ಯ ಮತ್ತು ವಿನಿತ್ ಸ್ವಲ್ಪ ಭಯದಲ್ಲೇ ಮುಂದೆ ಸಾಗುತ್ತಿದ್ದರು.) ಭೀಮಪ್ಪ : ಅರೆ ನೀವು ಬಂದ್ರಾ (ಎಂದು ಭೀಮಪ್ಪ ಅವರ ಹತ್ತಿರ ಬಂದ). ನಾರಾಯಣ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ. ಭೀಮಪ್ಪ : ಹೇಗೆ ಗೊತ್ತಾಗತ್ತೆ, ನೀವು ಯಾರು ನನ್ನನ್ನು ನೋಡೇ ಇಲ್ಲ, ನಾನು ನಿಮ್ಮ ಅಪ್ಪನ ಕಾಲದಿಂದಲೂ ಇಲ್ಲೇ ಇದ್ದೀನಿ, ಬನ್ನಿ ನಿಮ್ಮ ಮಗಳು ನಿಮಗೋಸ್ಕರನೇ ಪಂಚಾಯ್ತಿ ಕಟ್ಟೆ ಹತ್ತಿರ ಕಾಯ್ತಿದ್ದಾಳೆ. ಶೌರ್ಯ ಮತ್ತು ವಿನಿತ್ ಪಂಚಾಯ್ತಿ ಕಟ್ಟೆ ಹೆಸರು ಕೇಳಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು, ಎಲ್ಲರು ಕಟ್ಟೆಯ ಹತ್ತಿರ ಹೋದರು, ಅಲ್ಲಿ ಇಡೀ ಊರಿಗೆ ಊರೆ ಸೇರಿತ್ತು, ಪ್ರಸಾದ್ ಮತ್ತು ರಾಜ ಕೂಡ ಅಲ್ಲೇ ನಿಂತಿದ್ದರು, ಅವರು ನಾರಾಯಣನ ಕುಟುಂಬ ಬರುತ್ತಿರುವುದನ್ನು ನೋಡಿ ಓಡಿ ಹೋಗಿ ನಾರಾಯಣ ಮತ್ತು ಲಕ್ಷ್ಮಿಗೆ ನಮಸ್ಕರಿಸಿದರು, ಅವರಿಬ್ಬರು ಆಶೀರ್ವಾದ