ಅವಳ ಹೋರಾಟ - 10

  • 813
  • 324

ಶಿವರಾಜನನ್ನು ನೋಡಿದ ತಕ್ಷಣ ದುರ್ಗಾ ಓಡಿ ಹೋಗಿ ಅವನ ಕಾಲಿಗೆ ನಮಸ್ಕರಿಸಿದಳು. ಶಿವರಾಜ ಅವಳಿಗೆ ಆಶೀರ್ವಾದ ಮಾಡದೆ ಅಲ್ಲಿಂದ ಒಂದು ಹೆಜ್ಜೆ ಹಿಂದೆ ತೆಗೆದುಕೊಂಡ. ಶಿವರಾಜ ಹೀಗೆ ಮಾಡಿದ್ದನ್ನು ನೋಡಿ ದುರ್ಗಾಗೆ ತುಂಬ ಬೇಜಾರ್ ಆಯ್ತು, ಆದರೂ ಅದನ್ನು ತೋರಿಸಿಕೊಳ್ಳಲಿಲ್ಲ. ದುರ್ಗಾ : ಹೇಗಿದ್ದೀರಿ ದೊಡ್ಡಪ್ಪ (ಎಂದು ತುಂಬಾ ಕಾಳಜಿಯಿಂದ ಕೇಳಿದಳು). ಶಿವರಾಜ : ನೀನು ಯಾಕೆ ಬಂದೆ ಇಲ್ಲಿಗೆ? ಸುಲೋಚನಾ : ಶಿವರಾಜ, ಯಾಕೆ ಹೀಗೆ ಮಾತಾಡ್ತಿದ್ದೀಯಾ? ಇದು ಅವಳ ಮನೆ, ಅವಳು ಯಾವಾಗ ಬೇಕಾದರೂ ಬರಬಹುದು, ಎಷ್ಟು ದಿನ ಬೇಕಾದರೂ ಇರಬಹುದು. ಶಿವರಾಜ : ಬಂದು ಇನ್ನೂ ಸ್ವಲ್ಪ ಹೊತ್ತಾಗಿದ್ದರೂ ಆಗಲೇ ಅಮ್ಮನ್ನ ನನ್ನ ವಿರುದ್ಧ ಎತ್ತ ಕಟ್ಟಿಿದ್ದೀಯಲ್ಲಾ, ನಿನ್ನನ್ನ ಮೆಚ್ಚಬೇಕು ದುರ್ಗಾ. ದುರ್ಗಾ : ನನಗೆ ಗೊತ್ತು ದೊಡ್ಡಪ್ಪ, ನಿಮಗೆ ನನ್ನ ಮೇಲೆ ತುಂಬಾ ಕೋಪ ಇದೆ ಅಂತ. ಆದರೆ ನಿಮ್ಮ ಕೋಪಕ್ಕೆ ಯಾವ ಅರ್ಥವೂ ಇಲ್ಲ ಅನ್ನೋದು ನಿಮಗೂ ಗೊತ್ತು, ಎಲ್ಲರಿಗೂ ಗೊತ್ತು. ಶಿವರಾಜ :