ಅವಳ ಹೋರಾಟ - 9

(30)
  • 906
  • 378

ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ನಾರಾಯಣ ಹಾಗೆಯೇ ಯೋಚಿಸುತ್ತಾ ಕುಳಿತಿದ್ದ. ಆಗ ಅಲ್ಲಿಗೆ ರಾಘವೇಂದ್ರ ಮತ್ತು ಲಕ್ಷ್ಮಿ ಬಂದರು. ಲಕ್ಷ್ಮಿ: ಏನಾಯ್ತು? ಆಸ್ಪತ್ರೆಯಿಂದ ಬಂದಾಗಿನಿಂದ ನೀವು ಬೇರೆ ತರ ಕಾಣಿಸುತ್ತಿದ್ದೀರಾ. ಏನಾದರೂ ಯೋಚನೆ ಇದ್ದರೆ ನಮಗೆ ಹೇಳಿ. ಯಾಕೆ ಒಬ್ಬರೇ ಅನುಭವಿಸುತ್ತಿದ್ದೀರಾ? ದುರ್ಗಳನ್ನು ಅಲ್ಲಿಂದಲೇ ಅತ್ತೆ ಮನೆಗೆ ಕಳಿಸಿದ್ದೀರಿ ಯಾಕೆ? ನಾರಾಯಣ : ಹಾಗೇನಿಲ್ಲ ಲಕ್ಷ್ಮಿ, ದುರ್ಗ ಬಗ್ಗೆ ಯೋಚಿಸುತ್ತಿದ್ದೆ ಅಷ್ಟೇ. ಅಕಸ್ಮಾತ್ ಆ ಆಸಿಡ್ ಅವಳ ಮುಖಕ್ಕೆ ಬಿದ್ದಿದ್ದರೆ ಏನಾಗುತ್ತಿತ್ತು? ಲಕ್ಷ್ಮಿ: ಹೌದು, ಎಲ್ಲ ದೇವರ ಆಶೀರ್ವಾದ. ದುರ್ಗೆಗೆ ಹೆಚ್ಚು ಗಾಯ ಏನೂ ಆಗಿಲ್ಲ. ಡಾಕ್ಟರ್ ಕೂಡ ಇದು ಕೆಲ ತಿಂಗಳಲ್ಲಿ ವಾಸಿಯಾಗುತ್ತದೆ ಅಂತ ಹೇಳಿದ್ದಾರೆ. ರಾಘವೇಂದ್ರ : ಅಪ್ಪಾ, ಆಸಿಡ್ ಹಾಕಿದವನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದೆಯಾ? ನಾರಾಯಣ : ಆದಷ್ಟು ಬೇಗ ಎಲ್ಲ ಮಾಹಿತಿ ಸಿಗುತ್ತದೆ.