ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ಕೈ ಮೇಲೆ ಬಿದ್ದಿತ್ತು. ಎಲ್ಲರೂ ದುರ್ಗಾಳ ಕೈಗೆ ಏನಾಗಿದೆ ಎಂದು ನೋಡುತ್ತಿದ್ದರು, ಆದರೆ ದುರ್ಗಾ ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತಿದ್ದಳು. ಅವಳ ಕೈ ತುಂಬಾ ನೋವಾಗುತ್ತಿತ್ತು, ಆ ನೋವಿನಲ್ಲಿ ಅವಳಿಗೆ ಹೆಚ್ಚು ಯೋಚಿಸಲು ಆಗಲಿಲ್ಲ. ನಾರಾಯಣ : ದುರ್ಗಾ ಏನಾಯ್ತು ದುರ್ಗಾ (ಅಂತ ಅಳುತ್ತ ಕೇಳಿದ). ಲಕ್ಷ್ಮಿ : ಯಾರವನು, ಏನು ಎರಚಿ ಹೋದ (ಎಂದು ಕೋಪದಿಂದ ಕೇಳಿದಳು). ದುರ್ಗಾ : ಆಸಿಡ್ (ಎಂದು ರೋಷದಿಂದ ಹೇಳಿದಳು). ಲಕ್ಷ್ಮಿ : ಏನು ಆಸಿಡ್! ದುರ್ಗಾ ನೀನು ಏಕೆ ಅಡ್ಡ ಬಂದೆ (ಎಂದು ಅವಳ ಕೈ ಹಿಡಿದು ಜೋರಾಗಿ ಅಳಲು ಶುರು ಮಾಡಿದಳು). ದುರ್ಗಾ : ಅಮ್ಮ ಈಗ ನನಗೆ ನೋವಾಗುತ್ತಿದೆ, ಇದನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ನಿಮಗೆ ಏನಾದರೂ ಆಗಿದ್ದರೆ ನನಗೆ ಸಹಿಸಿಕೊಳ್ಳಲು ಆಗಲ್ಲ.