ದ್ವೀಮುಖ ಅಂತರಾಳ

  • 624
  • 243

ಮಲೆನಾಡಿನ ದಟ್ಟ ಅಡವಿಯ ನಡುವೆ ಇದ್ದ ಆ ಹಳೆಯ ಬಂಗಲೆಗೆ ಶಾಂತಿ ನಿವಾಸ ಎಂಬ ಹೆಸರಿತ್ತು. ಆದರೆ ಅಲ್ಲಿನ ವಾತಾವರಣದಲ್ಲಿ ಶಾಂತಿಗಿಂತ ಹೆಚ್ಚಾಗಿ ಮೌನವೇ ತುಂಬಿತ್ತು. ಕಿರಣ್ ಒಬ್ಬ ಪ್ರತಿಭಾವಂತ ಬರಹಗಾರ. ಈವರೆಗೆ ಅವನು ಬರೆದ 199 ಕಥೆಗಳು ಓದುಗರ ನಿದ್ದೆಗೆಡಿಸಿದ್ದವು. ಈಗ ಅವನ ಗುರಿ 200ನೇ ಕಥೆ. ಅದು ಅವನ ಜೀವನದ ಶ್ರೇಷ್ಠ ಕೃತಿಯಾಗಬೇಕು  ಎಂಬ ಹಠದೊಂದಿಗೆ ಅವನು ಈ ಏಕಾಂತಕ್ಕೆ ಬಂದಿದ್ದ.ಆ ಬಂಗಲೆಯಲ್ಲಿ ಅವನಿಗೆ ಜೊತೆಯಾಗಿ ಇದ್ದವನು ಸೋಮಣ್ಣ ಮಾತ್ರ. ಸೋಮಣ್ಣ ಆ ಮನೆಯನ್ನು ಕಾಯುವವನು ಎನ್ನುವುದಕ್ಕಿಂತ ಹೆಚ್ಚಾಗಿ, ಆ ಮನೆಯ ಒಂದು ಭಾಗವೇ ಆಗಿಬಿಟ್ಟಿದ್ದ ಮನುಷ್ಯ.ಮೊದಲ ಮೂರು ದಿನಗಳು ಕಿರಣ್‌ಗೆ ತುಂಬಾ ಆರಾಮದಾಯಕವಾಗಿದ್ದವು. ಸೋಮಣ್ಣ ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಕಾಫಿ ಮತ್ತು ತಿಂಡಿಯನ್ನು ತಂದು ಮೇಜಿನ ಮೇಲಿಡುತ್ತಿದ್ದ. ಕಿರಣ್ ಬರವಣಿಗೆಯಲ್ಲಿ ಮುಳುಗಿದ್ದಾಗ ಸೋಮಣ್ಣ ಒಂದು ಶಬ್ದವನ್ನೂ ಮಾಡುತ್ತಿರಲಿಲ್ಲ. ಆದರೆ ಕಿರಣ್‌ಗೆ ಒಂದು ವಿಚಿತ್ರ ಅನುಭವವಾಗುತ್ತಿತ್ತು. ಅವನು ಬರೆಯುವಾಗ ಯಾರೋ ತನ್ನ ಬೆನ್ನ ಹಿಂದೆಯೇ ನಿಂತು ಕಾಗದದ