ನನ್ನ ನೆರಳು ಕಾಣಿಯಾಗಿದೆ

  • 87

​ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಆ ಗದ್ದಲದ ನಡುವೆ ವಿಶ್ವ ಮೌನವಾಗಿ ನಿಂತಿದ್ದ. ಸುತ್ತಲೂ ಸಾವಿರಾರು ಜನ ಓಡುತ್ತಿದ್ದರು, ರೈಲುಗಳ ಕೂಗು, ಜನರ ಚೀರಾಟ, ಲಗೇಜ್‌ಗಳ ಸದ್ದು ಎಲ್ಲವೂ ಎಂದಿನಂತೆ ಇತ್ತು. ಎಲ್ಲರ ಕಾಲ ಬುಡದಲ್ಲೂ ಕಪ್ಪನೆಯ ಆಕೃತಿಗಳು ಅವರನ್ನೇ ಹಿಂಬಾಲಿಸುತ್ತಿದ್ದವು. ವಿಶ್ವ ಆಕಸ್ಮಿಕವಾಗಿ ನೆಲದ ಕಡೆ ನೋಡಿದ. ಅಲ್ಲಿ ಬರಿ ಸಿಮೆಂಟ್ ನೆಲವಿತ್ತು. ಸೂರ್ಯ ನೆತ್ತಿಯ ಮೇಲಿದ್ದರೂ ಅವನ ನೆರಳು ಇರಲಿಲ್ಲ.​ವಿಶ್ವ ಒಬ್ಬ ಸಾಧಾರಣ ಅಕೌಂಟೆಂಟ್. ಅವನ ಜೀವನ ಲೆಕ್ಕಾಚಾರದ ಪುಸ್ತಕಗಳ ನಡುವೆ ಕಳೆದುಹೋಗಿತ್ತು. ನೆರಳು ಕಾಣೆಯಾದ ದಿನ ಅವನಿಗೆ ಮೊದಲು ಅನಿಸಿದ್ದು ಭಯವಲ್ಲ, ಬದಲಾಗಿ ಒಂದು ವಿಚಿತ್ರವಾದ ನಿರಾಳತೆ. ಅವನು ತನ್ನ ಹೆಂಡತಿ ಶ್ರಾವಣಿ ಬಳಿ ಹೋಗಿ ಕೇಳಿದ, ಶ್ರಾವಣಿ ನಿನಗೆ ನನ್ನ ನೆರಳು ಕಾಣಿಸುತ್ತಿದೆಯೇ? ಶ್ರಾವಣಿ ಅವನನ್ನು ವಿಚಿತ್ರವಾಗಿ ನೋಡಿ, ವಿಶ್ವ, ಬಿಸಿಲಿನಲ್ಲಿ ಜಾಸ್ತಿ ಅಲೆದಾಡಬೇಡಿ, ತಲೆ ಕೆಟ್ಟಿದೆ ನಿಮಗೆ ಎಂದು ನಕ್ಕಳು.​ಅವನಿಗೆ ಅರಿವಾಯಿತು ಈ ಜಗತ್ತಿನಲ್ಲಿ ನೆರಳು ಕಾಣೆಯಾಗಿರುವುದು ಕೇವಲ ಅವನಿಗೆ ಮಾತ್ರ ಗೊತ್ತು. ಬೇರೆಯವರಿಗೆ