(೧೦ ವರ್ಷಗಳ ಹಿಂದೆ) ಪದ್ಮಾ ಯಾರ ಜೊತೆನೋ ಫೋನ್‌ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ಓದುತ್ತ ಕುಳಿತಿದ್ದ, ಲಕ್ಷ್ಮಿ ದುರ್ಗನನ್ನು ಆಟ ಆಡಿಸುತ್ತ ಕುಳಿತಿದ್ದಳು. ಸುಲೋಚನಾ : ಲಕ್ಷ್ಮಿ ಲಕ್ಷ್ಮಿ.... ಸುಲೋಚನಾಳ ಕೂಗು ಕೇಳಿ ಲಕ್ಷ್ಮಿ ದುರ್ಗನನ್ನು ಅಲ್ಲೇ ಬಿಟ್ಟು ಅಡುಗೆಮನೆಗೆ ಹೋದಳು, ಅಲ್ಲೇ ಆಡುತ್ತಿದ್ದ ದುರ್ಗ ಹಾಗೇ ಹೊರಗಡೆ ಹೋದಳು. ಪದ್ಮಾ ಫೋನ್‌ನಲ್ಲಿ ಮಾತನಾಡುತ್ತ ತುಂಬ ದೂರ ಹೋಗಿಬಿಟ್ಟಿದ್ದಳು, ಎದುರಿಗೆ ಲಾರಿ ಬರುತ್ತಿದ್ದದ್ದು ಅವಳಿಗೆ ಕಾಣಿಸಲಿಲ್ಲ, ಅಷ್ಟು ಮಗ್ಗ್ನವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆ ಲಾರಿ ಡ್ರೈವರ್ ಕುಡಿದು ಗಾಡಿ ಓಡಿಸುತ್ತಿದ್ದ. ಪದ್ಮಾ ಇನ್ನೇನು ಫೋನ್ ಇಳಿಸಿ ಆ ಕಡೆ ನೋಡೋಷ್ಟರಲ್ಲಿ ಲಾರಿ ಬಂದು ಅವಳಿಗೆ ಜೋರಾಗಿ ಗುದ್ದಿಬಿಟ್ಟಿತು. ಪ್ರಸಾದ್ ಮತ್ತು ರಾಜ ಜೋರಾಗಿ "ಅಮ್ಮ...." ಅಂತ ಕೂಗಿದರು. ಒಂದೇ ಕ್ಷಣದಲ್ಲಿ ಎಲ್ಲ ಮುಗಿದುಹೋಯಿತು, ದುರ್ಗವೂ ಜೋರಾಗಿ ಅಳಲು ಶುರುಮಾಡಿದಳು. ಸುಲೋಚನಾ ಮತ್ತು ಲಕ್ಷ್ಮಿ ಹೊರಗಡೆ ಓಡಿ ಬಂದರು, ಅವರಿಬ್ಬರೂ