ದಿ.ಓಟಿಪಿ

  • 4.8k
  • 3.4k

ಬೆಂಗಳೂರಿನ ಹೊರವಲಯದ ಒಂದು ಪಾಳುಬಿದ್ದ ಗ್ಯಾರೇಜ್. ಅಲ್ಲಿನ ವಾತಾವರಣದಲ್ಲಿ ತುಕ್ಕ ಹಿಡಿದ ಕಬ್ಬಿಣದ ವಾಸನೆ ಮತ್ತು ಹಳೆಯ ಆಯಿಲ್‌ನ ಜಿಡ್ಡಿತ್ತು. ಮಸುಕಾದ ಬೆಳಕಿನಲ್ಲಿ ರುದ್ರ ಕುಳಿತಿದ್ದ. ಅವನ ಎದುರು ಕುರ್ಚಿಗೆ ಕಟ್ಟಿ ಹಾಕಲ್ಪಟ್ಟಿದ್ದ ವ್ಯಕ್ತಿ ಮರಣಭಯದಿಂದ ನಡುಗುತ್ತಿದ್ದ. ರುದ್ರನಿಗೆ ಭೂಗತ ಲೋಕದಲ್ಲಿ ದಿ ಓ.ಟಿ.ಪಿ ಎಂಬ ಹೆಸರಿತ್ತು. ಅವನ ಸಿದ್ಧಾಂತ ಸ್ಪಷ್ಟವಾಗಿತ್ತು ಜಗತ್ತಿನಲ್ಲಿ ಮನುಷ್ಯನ ಅಸ್ತಿತ್ವ ಒಂದು ಆರು ಅಂಕಿಯ OTP ತರಹ ಇರಬೇಕು. ಉದ್ದೇಶ ಈಡೇರಿದ ಮೇಲೆ ಆ ಸಂಖ್ಯೆ ಅಥವಾ ವ್ಯಕ್ತಿ ಅಳಿದು ಹೋಗಬೇಕು. ಕುರುಹೂ ಇರಬಾರದು.ರುದ್ರ ಒಬ್ಬ ಕ್ಲೀನರ್ ಅಂದರೆ, ಪ್ರಭಾವಿ ವ್ಯಕ್ತಿಗಳು ಮಾಡಿದ ಕೊಲೆಯ ಸಾಕ್ಷ್ಯಗಳನ್ನು ಮತ್ತು ಆ ಕೊಲೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳನ್ನು ಒಂದು ಕುರುಹೂ ಇಲ್ಲದಂತೆ ನಾಶ ಮಾಡುವವನು. ಅಂದು ರಾತ್ರಿ ಅವನಿಗೆ ಬಂದಿದ್ದ ಮೆಸೇಜ್ ಸಂಕೇತ 910482. ಇದು ಅವನ ಇಂದಿನ ಕೆಲಸದ ಕೀಲಿಕೈ. ಅವನ ಎದುರು ಇದ್ದವನು ಒಬ್ಬ ರಾಜಕಾರಣಿಯ ಮಗ ಮಾಡಿದ ಕೊಲೆಯನ್ನು ನೋಡಿದ್ದ ಏಕೈಕ ಸಾಕ್ಷಿ. ರುದ್ರ