ಬೆಂಗಳೂರಿನ ಯಾವುದೋ ಒಂದು ಕಿರಿದಾದ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ಅವಿನಾಶ್ ಒಬ್ಬನೇ ವಾಸವಿದ್ದ. ಹಗಲಿಡೀ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕುಳಿತು ಗ್ರಾಫಿಕ್ ಡಿಸೈನಿಂಗ್ ಮಾಡುವುದು ಅವನ ಕಾಯಕ. ಅವನಿಗೆ ಅತಿ ದೊಡ್ಡ ಕನಸೆಂದರೆ ಒಂದು ಹೈ ಎಂಡ್ ಲ್ಯಾಪ್‌ಟಾಪ್ ಮತ್ತು ಐಫೋನ್ ಕೊಳ್ಳುವುದು. ಆದರೆ ಕೈಯಲ್ಲಿರುವ ಸಂಬಳ ಬಾಡಿಗೆ ಮತ್ತು ಊಟಕ್ಕೇ ಸರಿಯಾಗುತ್ತಿತ್ತು. ಒಂದು ಮಳೆಗಾಲದ ರಾತ್ರಿ, ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕುಳಿತಿದ್ದಾಗ ಅವನ ಫೋನ್ ಮಿನುಗಿತು. ಒಂದು ಆಕರ್ಷಕ ಜಾಹೀರಾತು QuickCash 2 Lakhs, No Documents, Zero Interest for 30 Days. ಅವಿನಾಶ್‌ಗೆ ಅದು ಅಕ್ಷರಶಃ ದೇವರೇ ಕಳುಹಿಸಿದ ಸಂದೇಶದಂತೆ ಕಂಡಿತು. ಅವನು ಆಪ್ ಇನ್‌ಸ್ಟಾಲ್ ಮಾಡಿದ. ಇನ್‌ಸ್ಟಾಲ್ ಮಾಡುವಾಗ ಅದು ಕೇಳಿದ ಪರ್ಮಿಷನ್‌ಗಳನ್ನು ಓದದೆ ALLOW' ಒತ್ತುತ್ತಾ ಹೋದ. ಆದರೆ 'ALLOW' ಎಂಬ ಒಂದೇ ಒಂದು ಕ್ಲಿಕ್ ಮೂಲಕ ಅವನು ತನ್ನ ಬೆಡ್‌ರೂಮ್‌ನಿಂದ ಹಿಡಿದು ತನ್ನ ಖಾಸಗಿ ಫೋಟೋಗಳವರೆಗೂ ಎಲ್ಲದರ ಕೀಲಿಕೈಯನ್ನು ಅಪರಿಚಿತರ ಕೈಗಿಟ್ಟಿದ್ದ ಎಂದು ಅವನಿಗೆ