ಅಂದ ದೃಷ್ಟಿಯ ಮಹಾಕಾವ್ಯ

  • 3.7k
  • 333

ಕರಾವಳಿಯ ಆ ಹಸಿರು ಮೈಸಿರಿಯ ನಡುವೆ ಇದ್ದ ಆ ಹಳೆಯ ಮನೆ ಯಾವಾಗಲೂ ಮೌನಕ್ಕೆ ಶರಣಾದಂತಿತ್ತು. ಆ ಮನೆಯ ಯಜಮಾನ ವಿಶ್ವನಾಥ್, ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು. ಅವರ ಮುಖದ ಮೇಲೆ ಯಾವಾಗಲೂ ಒಂದು ರೀತಿಯ ಬಿಗುವಾದ ಶಿಸ್ತು. ಅವರ ಮಗ ಸೂರ್ಯ, ನಗರದ ಸಾಹಿತ್ಯ ಲೋಕದಲ್ಲಿ ಸೂರ್ಯನಂತೆಯೇ ಬೆಳಗುತ್ತಿದ್ದ ಯುವ ಬರಹಗಾರ. ಆದರೆ ತಂದೆ ಮತ್ತು ಮಗನ ನಡುವೆ ಮಾತ್ರ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದಷ್ಟು ಅಂತರವಿತ್ತು.ಸೂರ್ಯನಿಗೆ ಅಪ್ಪ ಎಂದರೆ ಕೇವಲ ತನ್ನ ಕನಸುಗಳಿಗೆ ತಣ್ಣೀರು ಎರಚುವ ಒಬ್ಬ ಕಟುಕನಂತೆ ಕಾಣುತ್ತಿದ್ದರು. ಸೂರ್ಯ ಚಿಕ್ಕಂದಿನಿಂದಲೂ ಕವಿತೆ, ಕಥೆ ಎನ್ನುತ್ತಾ ಬೆಳೆದವನು. ಅಪ್ಪಾ, ಈ ಕವಿತೆ ಓದಿ ಹೇಗಿದೆ? ಎಂದು ಉತ್ಸಾಹದಿಂದ ಹೋದಾಗಲೆಲ್ಲಾ, ವಿಶ್ವನಾಥ್ ಅವರು ತಮ್ಮ ಎಡಗಣ್ಣನ್ನು ಅರೆಮುಚ್ಚಿ, ಬಲಗಣ್ಣಿನಿಂದ ಆ ಕಾಗದವನ್ನು ಹತ್ತಿರಕ್ಕೆ ಹಿಡಿದು ನೋಡಿ, ಇದೆಲ್ಲಾ ಹೊಟ್ಟೆ ತುಂಬಿಸಲ್ಲ ಸೂರ್ಯ, ಜೀವನ ಅಂದ್ರೆ ಬರೀ ಕಲ್ಪನೆಯಲ್ಲ, ವಾಸ್ತವ ಕಲಿ ಎಂದು ಆ ಕಾಗದವನ್ನು ಪಕ್ಕಕ್ಕೆ