ಆ ಕಡೆ ನಾರಾಯಣ ಹೊರಗಡೆ ಕೆಲಸಕ್ಕೆ ಅಂತ ಹೋದ. ಈ ಕಡೆ ಲಕ್ಷ್ಮಿ ಮನೆ ಕೆಲಸ ಶುರು ಮಾಡಿದ್ದಳು. ರಾತ್ರಿ ಆಯಿತು, ಎಲ್ಲರೂ ಮಲಗಿದರು, ಆದರೆ ಲಕ್ಷ್ಮಿ ಮಾತ್ರ ನಾರಾಯಣ ಬರುವುದನ್ನು ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಕೇಳಿಬಂತು. ಲಕ್ಷ್ಮಿ ಎದ್ದು ಬಾಗಿಲು ತೆಗೆದಳು. ನಾರಾಯಣ ನಿಂತಿದ್ದ. ಅವನು ತುಂಬ ಸುಸ್ತಾಗಿರುವಂತೆ ಕಾಣಿಸುತ್ತಿದ್ದ.