ಅವಳ ಹೋರಾಟ - 1

(234)
  • 6.1k
  • 1.4k

ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಹೊರಗಡೆ ಕೇಳಿಸಿತು, ಎಲ್ಲರಿಗೂ ತುಂಬಾ ಖುಷಿಯಾಯಿತು. ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ಹೊರಗಡೆ ಬಂದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆಗ ಎಲ್ಲರೂ ನಿರಾಳವಾದ ಉಸಿರನ್ನು ಬಿಟ್ಟರು. ಎಲ್ಲರೂ ಕುತೂಹಲದಿಂದ ಮಗುವಿನ ಬಗ್ಗೆ ಕೇಳಿದರು, ಈ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಡಾಕ್ಟರ್ “ನಿಮ್ಮ ಮನೆಗೆ ಹೆಣ್ಣುಮಗು ಬಂದಿದೆ” ಎಂದು ಹೇಳಿದರು, ಅದನ್ನು ಕೇಳಿ ಎಲ್ಲರಿಗೂ ತುಂಬಾ ಸಂತೋಷವಾಯಿತು. ಯಾಕೆಂದರೆ ಆ ತಾಯಿಗೆ ಮೊದಲೇ ಒಂದು ಗಂಡು ಮಗು ಇತ್ತು, ಹೀಗಾಗಿ “ಮನೆಗೆ ಮಹಾಲಕ್ಷ್ಮಿ ಬಂದಳು” ಎಂದು ಎಲ್ಲರೂ ತುಂಬಾ ಖುಷಿಪಟ್ಟರು. ಇಲ್ಲಿಂದಲೇ ಆ ಮುಗ್ಧ ಕಂದಮ್ಮನಾದ ನನ್ನ ಕಥಾನಾಯಕಿಯ ಕಥೆ ಆರಂಭವಾಗುತ್ತದೆ. ಮನೆಯಲ್ಲಿ ಎಲ್ಲರೂ ತುಂಬಾ ಖುಷಿಯಾಗಿದ್ದರು, ಯಾಕೆಂದರೆ ಇವತ್ತು ತಾಯಿ ಮತ್ತು ಮಗಳು ಇಬ್ಬರೂ