ಬೆಂಗಳೂರಿನ ಆ ಪಾರ್ಕ್‌ನಲ್ಲಿ ಮಧ್ಯಾಹ್ನದ ಬಿಸಿಲಿದ್ದರೂ ಗಾಳಿ ಮಾತ್ರ ಮರಗಟ್ಟಿತ್ತು. ಯಾವುದೋ ಒಂದು ಪುರಾತನ ಸ್ಮಶಾನದ ಮೌನ ಅಲ್ಲಿ ಹಠಾತ್ತಾಗಿ ಆವರಿಸಿದಂತಿತ್ತು. ಆದರ್ಶ್‌ನ ಕೈಯಲ್ಲಿದ್ದ ಮೊಬೈಲ್ ಫೋನ್‌ನ ಸ್ಕ್ರೀನ್ ಮೇಲೆ ಅವನ ಬೆರಳುಗಳು ನಡುಗುತ್ತಿದ್ದವು. ಅಶ್ವತ್ಥಾಮನ ಆ ಭೀಕರ ಅಟ್ಟಹಾಸದ ಧ್ವನಿ ನೀನು ಎಂಟು ತಿಂಗಳಿಂದ ಪ್ರೀತಿಸುತ್ತಿರುವ ಆ ಹುಡುಗಿ ಈಗ ನನ್ನ ಕಪಿಮುಷ್ಠಿಯಲ್ಲಿದ್ದಾಳೆ. ಅವನ ಎದೆಯನ್ನು ಸಾವಿರ ಚೂರುಗಳಾಗಿ ಸೀಳಿದಂತಿತ್ತು. ಆದರ್ಶ್‌ಗೆ ತಾನು ಪ್ರೀತಿಸುತ್ತಿದ್ದ ಆ ಮುಗ್ಧ ಮುಖ ಕಣ್ಣಮುಂದೆ ಬಂತು. ಅವಳು ಕೇವಲ ಅವನ ಗೆಳತಿಯಾಗಿರಲಿಲ್ಲ, ಅವಳು ಈ ಕತ್ತಲೆಯ ಜೀವನದಲ್ಲಿ ಆದರ್ಶ್ ಕಂಡಿದ್ದ ಏಕೈಕ ಬೆಳಕಿನ ಕಿರಣವಾಗಿದ್ದಳು. ದಿನವೂ ಅವಳ ಒಂದು ನಗುವನ್ನು ತಪ್ಪದೇ ನೋಡುತ್ತಿದ್ದ , ಅವಳಿಗಾಗಿ ಬಾಕ್ಸಿಂಗ್ ಅಭ್ಯಾಸದ ರೀಲ್ಸ್ ಮಾಡಿ ಅವಳ ಮೆಚ್ಚುಗೆಗಾಗಿ ಕಾಯುತ್ತಿದ್ದ. ಆದರೆ ಇಂದು ಅವಳೇ ಈ ಶಾಪಗ್ರಸ್ತ ಅಶ್ವತ್ಥಾಮನ ರಕ್ತಸಿಕ್ತ ಚದುರಂಗದಾಟದಲ್ಲಿ ಒಂದು ಅಸಹಾಯಕ ದಾಳವಾಗಿದ್ದಾಳೆ. ಎಲ್ಲಿದ್ದಾಳೆ ಅವಳು? ಅವಳಿಗೆ ಒಂದು ಸಣ್ಣ ತೊಂದರೆಯಾದರೂ ನಾನು ಈ ಕಥೆಯನ್ನು ಇಲ್ಲಿಗೇ ಸುಟ್ಟು