ಬೆಳಗಿನ ಜಾವದ ಬೆಂಗಳೂರು ಎಂದಿನಂತೆ ಯಾಂತ್ರಿಕವಾಗಿ ಎಚ್ಚರಗೊಂಡಿತ್ತು. ಮೆಜೆಸ್ಟಿಕ್‌ನಿಂದ ಹಿಡಿದು ಎಲೆಕ್ಟ್ರಾನಿಕ್ ಸಿಟಿಯವರೆಗೆ ವಾಹನಗಳ ಸದ್ದು ಅಬ್ಬರಿಸುತ್ತಿತ್ತು. ಆದರೆ ಅಂದು ಗಾಳಿಯಲ್ಲಿ ಒಂದು ವಿಚಿತ್ರವಾದ ಭಾರವಿತ್ತು, ಮನುಷ್ಯರ ಉಸಿರಾಟದಲ್ಲಿ ಒಂದು ರೀತಿಯ ಮಂದತೆ ಆವರಿಸಿತ್ತು. ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್ ಏರಿ ರಸ್ತೆಗೆ ಇಳಿದಾಗ, ಅವನ ಹಣೆಯ ಮೇಲಿದ್ದ ಆ ಅತೀಂದ್ರಿಯ ಶಿರಸ್ತ್ರಾಣದ ಭಾರ ಅವನ ಆತ್ಮವನ್ನೇ ಅದುಮುತ್ತಿತ್ತು. ವಿಚಿತ್ರವೆಂದರೆ, ಆ ಶಿರಸ್ತ್ರಾಣ ಈಗ ಹೊರಗಿನ ಕಣ್ಣಿಗೆ ಕಾಣಿಸುತ್ತಿರಲಿಲ್ಲ ಅದು ಅವನ ಚರ್ಮ ಮತ್ತು ಮೂಳೆಗಳೊಂದಿಗೆ ಪೂರ್ಣವಾಗಿ ವಿಲೀನವಾಗಿತ್ತು. ಆದರೆ ಅವನ ಕಣ್ಣುಗಳಲ್ಲಿ ಮಾತ್ರ ಒಂದು ಕಡು ಕೆಂಪು ಬಣ್ಣದ ತೀಕ್ಷ್ಣತೆ ಇತ್ತು, ಅದು ಸಾಮಾನ್ಯ ಮನುಷ್ಯನ ದೃಷ್ಟಿಯಾಗಿರಲಿಲ್ಲ. ಅವನ ಜಾಕೆಟ್‌ನ ಹಿಂಭಾಗದಲ್ಲಿದ್ದ ಆ ಹಸಿರು ಬಣ್ಣದ ಫುಡ್ ಡೆಲಿವರಿ ಬ್ಯಾಗ್ ಈಗ ಕೇವಲ ಹೋಟೆಲ್‌ಗಳ ಆಹಾರದ ಪೊಟ್ಟಣಗಳನ್ನು ಹೊತ್ತಿರಲಿಲ್ಲ, ಅದು ಅಶ್ವತ್ಥಾಮನ ಕರಾಳ ಸಾಮ್ರಾಜ್ಯದ ರಹಸ್ಯಗಳನ್ನು ಮತ್ತು ಇಡೀ ನಗರಕ್ಕೆ ಹರಡಬೇಕಾದ ಶಾಪದ ಬೀಜಗಳನ್ನು ಹೊತ್ತಿತ್ತು.ಆದರ್ಶ್‌ಗೆ ಮೊದಲ