ನಗರದ ಹೃದಯಭಾಗದಲ್ಲಿದ್ದ ಆ ಎತ್ತರದ ಗಾಜಿನ ಕಟ್ಟಡ ಗ್ಲೋಬಲ್ ಟೆಕ್ ಇನ್ಫೋ. ಅಲ್ಲಿನ ಅಹಂಕಾರ ಆ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಸೂರ್ಯ ಅಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ, ಅವನ ಕೈಯಲ್ಲಿದ್ದ ಹಳೆಯ ಡೈರಿ ಮತ್ತು ಪೆನ್ನನ್ನು ನೋಡಿ ಅಲ್ಲಿನ ಇಬ್ಬರು ಸೀನಿಯರ್ ಮ್ಯಾನೇಜರ್‌ಗಳಾದ ಅಜಯ್ ಮತ್ತು ರೋಹನ್ ನಗುತ್ತಿದ್ದರು. ಸೂರ್ಯ ಮುಂಜಾನೆ ತನ್ನ HF Deluxe ಬೈಕ್ ಮೇಲೆ ಬಂದು ಇಳಿಯುವುದರಿಂದ ಹಿಡಿದು, ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಡೈರಿ ಹಿಡಿದು ಏನೋ ಬರೆಯುವವರೆಗೆ ಎಲ್ಲವೂ ಅವರಿಗೆ ಹಾಸ್ಯವಾಗಿತ್ತು. ಒಂದು ದಿನ ಮೀಟಿಂಗ್ ಹಾಲ್‌ನಲ್ಲಿ ಎಲ್ಲರ ಎದುರು ಅಜಯ್ ಸೂರ್ಯನ ಡೈರಿಯನ್ನು ಕಸಿದುಕೊಂಡನು. ಏನೋ ಸೂರ್ಯ, ಈ ಆಫೀಸ್ ಕೆಲಸ ಬಿಟ್ಟು ಏನು ಕಥೆ ಬರೆಯುತ್ತಿದ್ದೀಯಾ? ಲೇ ರೋಹನ್, ನೋಡು ಇಲ್ಲಿ ಇವನು ಮಾಯಾ ಅಂತ ಯಾವುದೋ ಸೀರಿಯಲ್ ಬರೆಯುತ್ತಿದ್ದಾನಂತೆ ರೈಟರ್ ಅಂತೆ ಇವನು ಎಂದು ಕಿರುಚುತ್ತಾ ಆ ಡೈರಿಯ ಪುಟಗಳನ್ನು ಹರಿದು ಗಾಳಿಯಲ್ಲಿ ತೂರಿದನು. ರೋಹನ್ ಅಟ್ಟಹಾಸದಿಂದ ನಗುತ್ತಾ, ಲೇ ಸೂರ್ಯ, ಬರವಣಿಗೆ ಅನ್ನೋದು