ಒತ್ತಡದಿಂದ ನಿರಾಳದೆಡೆಗೆ...

(14)
  • 681
  • 168

ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓಡುವುದು, ರಾತ್ರಿ ನಿದ್ರೆ ಬರದೇ ಕಳವಳ, ಸಣ್ಣ ವಿಷಯಕ್ಕೂ ಆತಂಕ, ಒಳಗೊಂದು ಖಾಲಿತನ… ಇವೆಲ್ಲಾ ನಿಮಗೆ ಪರಿಚಿತವಾಗಿದ್ದರೆ, ಈ ಪುಸ್ತಕ ನಿಮ್ಮಿಗಾಗಿ. ಈ ಪುಸ್ತಕವು “ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು?” ಎಂದು ಕೇಳುವುದಿಲ್ಲ. ಅದಕ್ಕಿಂತ ಮಹತ್ವದ ಪ್ರಶ್ನೆಯನ್ನು ಕೇಳುತ್ತದೆ: ಒತ್ತಡವೇ ಯಾಕೆ ಉಂಟಾಗುತ್ತದೆ? ಒಂದೇ ಪರಿಸ್ಥಿತಿಯಲ್ಲಿ ಒಬ್ಬ ಶಾಂತವಾಗಿರುತ್ತಾನೆ, ಇನ್ನೊಬ್ಬ ತೀವ್ರ ಒತ್ತಡಕ್ಕೆ ಒಳಗಾಗುತ್ತಾನೆ. ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯಾಣವೇ ಒತ್ತಡದಿಂದ ನಿರಾಳದೆಡೆಗೆ. ಈ ಪುಸ್ತಕದಲ್ಲಿ ನೀವು ಓದುವ ಕಥೆಗಳು ಕಾಲ್ಪನಿಕವಲ್ಲ. ಅವು ನಿಜವಾದ ಅನುಭವಗಳ ಆಧಾರದ ಮೇಲೆ ಬರೆಯಲ್ಪಟ್ಟವು. ಹೆಸರುಗಳನ್ನು ಮಾತ್ರ ಬದಲಿಸಲಾಗಿದೆ. ಈ ಕಥೆಗಳಲ್ಲೇ ನೀವು ನಿಮ್ಮನ್ನೇ ಕಾಣಬಹುದು. ಇಲ್ಲಿ ಧ್ಯಾನವನ್ನು ಒಂದು ಕಠಿಣ ಅಭ್ಯಾಸವಾಗಿ ಅಥವಾ ಯಾವುದೋ ವಿಶೇಷ ಸಾಧನೆಯಂತೆ ಹೇಳಲಾಗುವುದಿಲ್ಲ. ಧ್ಯಾನವೆಂದರೆ ಇಲ್ಲಿ ನಿಮ್ಮೊಳಗೆ ಈಗಾಗಲೇ ಇರುವ ಅರಿವನ್ನು , ಆನಂದವನ್ನು ಗಮನಿಸುವುದು. ದೇಹದಲ್ಲಿ ಏನಾಗುತ್ತಿದೆಯೋ, ಮನಸ್ಸಿನಲ್ಲಿ ಏನೋ ನಡೆಯುತ್ತಿದೆಯೋ,