ಧ್ವನಿ: ಒಳರಿವಿನ ಹೊಳಹುಗಳು - ಭಾಗ 3( part 3)

  • 246
  • 114

ಬೆಳಗಿನ ಜಾವದ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಗದ್ದಲ ಶುರುವಾಗಿತ್ತು. ಶ್ರಾವ್ಯ. ಅವಳು ತನ್ನ ಸೀನಿಯರ್ ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ಡಾಕ್ಟರ್ ಆದ ಡಾ. ಶರ್ಮಾ ಅವರ ಜೊತೆ ' ರೌಂಡ್ಸ್' ನಲ್ಲಿದ್ದಳು.ಅವರು ಬೆಡ್ ನಂ. 12 ರ ಬಳಿ ಬಂದು ನಿಂತರು. ಅಲ್ಲಿ ಮಿಸ್ಟರ್ ದೇಸಾಯಿ ಎಂಬ ಮಧ್ಯವಯಸ್ಸಿನ ವ್ಯಕ್ತಿ ಮಲಗಿದ್ದರು. ಅವರನ್ನು ನ್ಯುಮೋನಿಯಾ (Pneumonia) ಕಾರಣದಿಂದ ದಾಖಲಿಸಲಾಗಿತ್ತು.ಡಾ. ಶರ್ಮಾ ರೋಗಿಯ ಚಾರ್ಟ್ ಮತ್ತು ಇತ್ತೀಚಿನ ವರದಿಗಳನ್ನು ಪರಿಶೀಲಿಸಿದರು."ಗುಡ್..." ಡಾ. ಶರ್ಮಾ ತೃಪ್ತಿಯಿಂದ ತಲೆಯಾಡಿಸಿದರು. "ಮಿಸ್ಟರ್ ದೇಸಾಯಿ, ನಿಮ್ಮ ವೈಟಲ್ಸ್ (Vitals) ಎಲ್ಲವೂ ಸ್ಟೇಬಲ್ ಇವೆ. ಎದೆಯ ಎಕ್ಸ್-ರೇ ಕೂಡ ಮೊದಲಿಗಿಂತ ಸುಧಾರಿಸಿದೆ. ರಕ್ತದಲ್ಲಿನ ಬಿಳಿ ರಕ್ತಕಣಗಳ ಸಂಖ್ಯೆ (WBC count) ಕಡಿಮೆಯಾಗಿದೆ. ಸೋಂಕು ಹತೋಟಿಗೆ ಬಂದಿದೆ."ನಂತರ ಅವರು ರೆಸಿಡೆಂಟ್‌ಗಳ ಕಡೆ ತಿರುಗಿ ಸೂಚನೆ ನೀಡಿದರು: "ಇದೇ ಆಂಟಿಬಯೋಟಿಕ್ ಅನ್ನು ಮುಂದುವರಿಸಿ. ಹೀಗೆ ಚೇತರಿಸಿಕೊಂಡರೆ, ಇನ್ನು 2-3 ದಿನಗಳಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಬಹುದು."ತಂಡ ಮುಂದಿನ ಬೆಡ್‌ಗೆ ಹೋಗಲು ಸಿದ್ಧವಾಯಿತು. ಮಿಸ್ಟರ್ ದೇಸಾಯಿ ಕೂಡ