ಪರೀಕ್ಷಾ ಕೊಠಡಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನವಿತ್ತು. ಆದರೆ ಶ್ರಾವ್ಯಳ ತಲೆಯಲ್ಲಿ ಮಾತ್ರ ಬಿರುಗಾಳಿ ಬೀಸುತ್ತಿತ್ತು.ಅವಳ ಮುಂದಿದ್ದ ಪ್ರಶ್ನೆ ಪತ್ರಿಕೆಯ ಮೇಲಿನ ಅಕ್ಷರಗಳು ಅವಳನ್ನು ಅಣಕಿಸುವಂತೆ ನೋಡುತ್ತಿದ್ದವು.ಪ್ರಶ್ನೆ 3: ಮಾರ್ಚಿಯಾಫಾವಾ-ಬಿಗ್ನಾಮಿ ಕಾಯಿಲೆಯ ರೋಗ ಲಕ್ಷಣಗಳೇನು? ಶ್ರಾವ್ಯಳ ಕೈ ನಡುಗುತ್ತಿತ್ತು. "ಇದು ಅಸಾಧ್ಯ... ಇದು ಸಂಭವಿಸಲೇಬಾರದು," ಎಂದು ಅವಳ ವೈಜ್ಞಾನಿಕ ಮಿದುಳು ಕಿರುಚುತ್ತಿತ್ತು. "ಜಗತ್ತಿನಲ್ಲಿ ಕಾಕತಾಳೀಯ ಘಟನೆಗಳು ನಡೆಯುತ್ತವೆ, ನಿಜ. ಆದರೆ ಇಂತಹ ಕಾಕತಾಳೀಯ ಘಟನೆ? ಇದು ಗಣಿತಶಾಸ್ತ್ರದ ಪ್ರಕಾರವೂ ಅಸಂಭವ!" ಅವಳು ಅಕ್ಕಪಕ್ಕ ನೋಡಿದಳು. ಅವಳ ಸಹಪಾಠಿಗಳು ತಲೆ ಕೆರೆದುಕೊಳ್ಳುತ್ತಿದ್ದರು. ಕೆಲವರು ಪೆನ್ನಿನ ತುದಿಯನ್ನು ಕಚ್ಚುತ್ತಾ, ಆಕಾಶ ನೋಡುತ್ತಾ ಉತ್ತರಕ್ಕಾಗಿ ಪರದಾಡುತ್ತಿದ್ದರು. ನ್ಯೂರಾಲಜಿಯ ಅತ್ಯಂತ ಕಠಿಣವಾದ ಪ್ರಶ್ನೆ ಪತ್ರಿಕೆ ಇದಾಗಿತ್ತು. ಆದರೆ ಶ್ರಾವ್ಯ?ಅವಳು ದೀರ್ಘವಾಗಿ ಉಸಿರು ತೆಗೆದುಕೊಂಡಳು. ನಿಧಾನವಾಗಿ ಪೆನ್ನು ಎತ್ತಿಕೊಂಡಳು.ಪೆನ್ನು ಕಾಗದವನ್ನು ಸ್ಪರ್ಶಿಸುತ್ತಿದ್ದಂತೆ, ಒಂದು ವಿಚಿತ್ರ ವಿದ್ಯಮಾನ ನಡೆಯಿತು. ಅವಳ ಕೈ ತಾನಾಗಿಯೇ ಚಲಿಸಲು ಶುರುಮಾಡಿತು. ಉತ್ತರಗಳು... ಅವಳು ಬೆಳಗಿನ ಜಾವ 4 ಗಂಟೆಗೆ ಓದಿದ ಆ ಸಾಲುಗಳು... ಅವಳ ಮನಸ್ಸಿನಲ್ಲಿ ಸರಾಗವಾಗಿ ಹರಿದು