ಧ್ವನಿ: ಒಳರಿವಿನ ಹೊಳಹುಗಳು - ಮೊದಲ ಧ್ವನಿ

  • 601
  • 153

ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಮೌನ ಆವರಿಸಿತ್ತು.ತನ್ನ ಕೋಣೆಯಲ್ಲಿ ಶ್ರಾವ್ಯ ಗಾಢ ನಿದ್ರೆಯಲ್ಲಿದ್ದಳು. ಕಿಟಕಿಯ ಪರದೆಯ ಸಂದುಗಳಿಂದ ಬೀದಿ ದೀಪದ ಮಸುಕಾದ ಬೆಳಕು ಕೋಣೆಯೊಳಗೆ ನುಸುಳಿ, ನೆಲದ ಮೇಲೆ ವಿಚಿತ್ರವಾದ ನೆರಳುಗಳನ್ನು ಸೃಷ್ಟಿಸುತ್ತಿತ್ತು. ಪಕ್ಕದ ಮೆಜಿನ ಮೇಲಿದ್ದ ಡಿಜಿಟಲ್ ಗಡಿಯಾರದಲ್ಲಿ ಕೆಂಪು ಅಕ್ಷರಗಳು ತೋರುತ್ತಿದ್ದವು: 3:23.ಇದ್ದಕಿದ್ದಂತೆ ಶ್ರಾವ್ಯಳಿಗೆ ಎಚ್ಚರವಾಯಿತು. ಆದರೆ, ಇದೊಂದು ಸಹಜವಾದ ಎಚ್ಚರವಾಗಿರಲಿಲ್ಲ.ಅವಳ ಕಣ್ಣುರೆಪ್ಪೆಗಳು ಇನ್ನೂ ಮುಚ್ಚಿದ್ದವು. ಆದರೆ ಮನಸ್ಸು ಮಾತ್ರ ಥಟ್ಟನೆ ಸಂಪೂರ್ಣ ಎಚ್ಚರಗೊಂಡಿತ್ತು. ಎಷ್ಟರಮಟ್ಟಿಗೆಂದರೆ, ಕೋಣೆಯ ಫ್ಯಾನು ತಿರುಗುವ ಸದ್ದು, ಗೋಡೆ ಗಡಿಯಾರದ 'ಟಿಕ್-ಟಿಕ್' ಶಬ್ದ ಎಲ್ಲವೂ ಸ್ಪಷ್ಟವಾಗಿ ಕೇಳಿಸುತ್ತಿತ್ತು. "ಎದ್ದೇಳು ಶ್ರಾವ್ಯ" ಎಂದು ತನಗೆ ತಾನೇ ಆಜ್ಞೆ ಮಾಡಿಕೊಂಡಳು.ಆದರೆ... ಒಡಲು ಕಲ್ಲಾದಂತಿತ್ತು!ಕೈಬೆರಳುಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದಳು, ಆಗಲಿಲ್ಲ. ಕಾಲುಗಳನ್ನು ಎತ್ತಲು ನೋಡಿದಳು, ಶಕ್ತಿಯೇ ಇಲ್ಲದಂತಾಗಿತ್ತು. ಯಾರೋ ತನ್ನ ಇಡೀ ದೇಹವನ್ನು ಹಗ್ಗದಲ್ಲಿ ಬಿಗಿದು ಕಟ್ಟಿ ಹಾಕಿದಂತೆ,