ಸಸ್ಯಗಳ ಬುದ್ಧಿವಂತಿಕೆ

  • 801
  • 255

ಕಾಡಿನ ಅಂಚಿನಲ್ಲಿರುವ ಆ ಪುಟ್ಟ ಗ್ರಾಮದ ಹೆಸರು ಹಸಿರುವಾಣಿ ಅಲ್ಲಿನ ಹಿರಿಯರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಕಾಡಿನ ಒಳಗೆ ಹೋದಾಗ ಮೌನವಾಗಿರು, ಏಕೆಂದರೆ ಮರಗಳು ನಿನ್ನ ಹೆಜ್ಜೆಯ ಸದ್ದನ್ನು ಆಲಿಸುತ್ತಿರುತ್ತವೆ  ಹಳ್ಳಿಯ ಜನರಿಗೆ ಇದು ಕೇವಲ ನಂಬಿಕೆಯಾಗಿತ್ತು, ಆದರೆ ಅದೇ ಗ್ರಾಮದಲ್ಲಿ ಸಂಶೋಧನೆ ನಡೆಸುತ್ತಿದ್ದ ಡಾ. ಮಾಧವನಿಗೆ ಇದು ವೈಜ್ಞಾನಿಕ ಸತ್ಯವಾಗಿತ್ತು. ಮಾಧವ ತನ್ನ ಪ್ರಯೋಗಾಲಯದಿಂದ ಹೊರಬಂದು ಕಾಡಿನ ಅತ್ಯಂತ ಹಳೆಯ ಭಾಗವಾದ ದೇವವನಕ್ಕೆ ಕಾಲಿಟ್ಟನು. ಅಲ್ಲಿ ಒಂದು ಸಾವಿರ ವರ್ಷ ಹಳೆಯದಾದ ಬೃಹತ್ ತಾಯಿ ಮರವಿದೆ ಆ ಮರವು ಕಾಡಿನ ಅಜ್ಜಿಯಂತೆ. ನಮಗೆ ಮರಗಳು ಬಿಡಿಬಿಡಿಯಾಗಿ ಕಾಣುತ್ತವೆ. ಆದರೆ ಮಾಧವ ತನ್ನ ಮೈಕ್ರೋಸ್ಕೋಪ್ ಮೂಲಕ ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ. ಮಣ್ಣಿನ ಅಡಿಯಲ್ಲಿ ಸಸ್ಯಗಳ ಬೇರುಗಳು ಮತ್ತು ಮೈಕೋರೈಜಲ್ ಶಿಲೀಂಧ್ರಗಳು ಸೇರಿ ಒಂದು ಬೃಹತ್ ಜಾಲವನ್ನು ನಿರ್ಮಿಸಿದ್ದವು. ಇದನ್ನು ಮಾಧವ ಕಾಡಿನ ಇಂಟರ್ನೆಟ್ ಎಂದು ಕರೆಯುತ್ತಿದ್ದನು.ಒಂದು ದಿನ, ಒಂದು ಸಣ್ಣ ಸಸಿ ತಾಯಿ ಮರದ ನೆರಳಿನಲ್ಲಿ ಬೆಳೆಯಲು ಕಷ್ಟಪಡುತ್ತಿತ್ತು.