ಗಿಡದ ನುಡಿ: ಪರಿಸರ ಸಿದ್ಧರ ಉಗಮ - 1

  • 1.3k
  • 438

ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾಗ, ಜಗತ್ತು ಒಂದು ಮಾಂತ್ರಿಕ ಕನಸಿನಂತಾಗುತ್ತದೆ. ಆದರೆ ಅರ್ಜುನನಿಗೆ, ಅದು ಮತ್ತೊಂದು ಲೋಕವೇ ಆಗಿತ್ತು.ಗಡಿಯಾರ ಆರು ಗಂಟೆ ಬಾರಿಸುವಾಗಲೇ ಅವನ ಕಣ್ಣು ತೆರೆಯಿತು ಎಚ್ಚರವಾದನು, ಇನ್ನು ನಿದ್ದೆಗಣ್ಣು, ಮೈಮುರಿಯುತ್ತ ಎದ್ದನು, ಕಿಟಕಿಯ ಬಳಿಗೆ ಹೋಗಿ ಪರದೆ ಎಳೆದನು. ಹೊರಗೆ ಮುಸುಕು ಮಂಜು ಇನ್ನೂ ದಟ್ಟವಾಗಿ ಹರಡಿತ್ತು, ಆದರೆ ಅವನ ಕಣ್ಣುಗಳಿಗೆ ಮಾತ್ರ - ಆ ಸಾಮಾನ್ಯ ಮಂಜಿನ ಮುಸುಕಿನಲ್ಲಿ ಮತ್ತೊಂದು ವಿಶ್ವವೆ ತೇಲಾಡುತ್ತಿತ್ತು. ಚಿನ್ನದ ಬಣ್ಣದ್ದು. ಜೀವಂತವಾದುದು. ಸಸ್ಯಗಳ ಸುತ್ತ ಸುತ್ತುವರೆದಿತ್ತು, ವಿವಿಧ ಬಣ್ಣಗಳ