ನನ್ನವನೀ - 1

ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮೊಳಗೆ ಉಳಿದುಕೊಳ್ಳುವ ಭಾವನೆಗಳಿಗಾಗಿ ಇರುತ್ತವೆ. ಈ ಆದಿತ್ಯ ️ ಅವನಿ  ಕಥೆ ಎರಡನೇ ಗುಂಪಿಗೆ ಸೇರಿದ್ದು.ಇಲ್ಲಿ ಜೀವನದ ಸಣ್ಣ ಸಣ್ಣ ಕ್ಷಣಗಳಿಗೆ, ಮೌನಕ್ಕೆ ಮತ್ತು ಮಾತುಕತೆಗಳಿಗೆ ಹೆಚ್ಚಿನ ಜಾಗವಿದೆ. ಹಾಗಾಗಿ, ಕಥೆಯ ಓಟ ನಿಮಗೆ ಸ್ವಲ್ಪ ನಿಧಾನ ಅನಿಸಬಹುದು ಅಥವಾ ಎಪಿಸೋಡ್‌ಗಳು ದೀರ್ಘವೆನಿಸಬಹುದು. ಆದರೆ, ಆ ದೀರ್ಘತೆಯ ಹಿಂದಿರುವುದು ಪಾತ್ರಗಳ ನಡುವಿನ ಆಳವಾದ ಭಾವನೆಗಳನ್ನು ಮತ್ತು ಅವರ ಮನಸ್ಥಿತಿಯನ್ನು ನಿಮಗೆ ಹತ್ತಿರವಾಗಿಸುವ ಒಂದು ಪುಟ್ಟ ಪ್ರಯತ್ನ ಅಷ್ಟೇ.ಇದು ಮುಂದೇನಾಗಬಹುದು ? ಎನ್ನುವ ಕುತೂಹಲಕ್ಕಾಗಿ ಬರೆದ ಕಥೆಯಲ್ಲ. ಬದಲಾಗಿ ಈ ಪಾತ್ರಗಳ ಜೊತೆ ನೀವೂ ಒಂದು ಜೀವನವನ್ನು ಬದುಕಲಿ ಎಂಬ ಹಂಬಲದ ಬರಹ. ಇಲ್ಲಿ ನಾಟಕೀಯ ತಿರುವುಗಳಿಗಿಂತ ಸಹಜ ಸಂಬಂಧಗಳ ಸೌಂದರ್ಯಕ್ಕೆ ಒತ್ತು ನೀಡಿದ್ದೇನೆ.ಯಾರು ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಭಾವನೆಗಳ ತೀವ್ರತೆಯನ್ನು ತಾಳ್ಮೆಯಿಂದ ಆಸ್ವಾದಿಸಲು ಇಷ್ಟಪಡುತ್ತೀರೋ, ಅವರಿಗೆ ಈ ಆದಿತ್ಯ ️ ಅವನಿ  ಪಯಣ ಇಷ್ಟವಾಗಬಹುದು ಎಂಬ ನಂಬಿಕೆ.--------------------------------------------------------ಮಲೆನಾಡಿನ