ನಂದನೂರಿನ ಮೂರು ಹೃದಯಗಳು

  • 1.4k
  • 576

ನಂದನೂರಿನ ಮೂರು ಹೃದಯಗಳು (ಕೂಲಿ ಕಾರ್ಮಿಕರ ಬದುಕು-ಪ್ರೇಮ ಕಥೆ)ಲೇಖಕ–ವಾಮನಾಚಾರ್ಯ  ಬೆಂಗಳೂರು ನಗರದಿಂದ ಇಪ್ಪತ್ತೈದು ಕಿಲೋಮೀಟರ್ ದೂರ ಇರುವ ಬಡಾವಣೆ ನಂದನೂರು. ವಿವೇಕಾನಂದ ಮುಖ್ಯ ರಸ್ತೆ ಪಕ್ಕದಲ್ಲಿ ಬಹು ಮಹಡಿ ಅಂತಸ್ತಿನ ವಿಶಾಲವಾದ ಕಲ್ಯಾಣ್ ಮಹೇಶ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಕಟ್ಟಡ ಕೆಲಸ ಭರದಿಂದ ಸಾಗುತ್ತಿತ್ತು. ವಿಶೇಷವೆಂದರೆ, ಬಿಲ್ಡರ್ ರಿಂದ ಹಿಡಿದು ಕೂಲಿ ಕಾರ್ಮಿಕ ರೆಲ್ಲರೂ ಉತ್ತರ ಕರ್ನಾಟಕದವರೇ ಆಗಿದ್ದರು.ಕಲಬುರ್ಗಿ ಜಿಲ್ಲೆಯ ಯಾಳಗಿಯಿಂದ ಬಂದ ಇಪ್ಪತ್ತೈದು ವರ್ಷದ ಯುವಕ ಶಿವು ಗಾರೆ ಕೆಲಸ ಮಾಡುತ್ತಿದ್ದ. ಬಿಲ್ಡರ್ ಸೋಮಶೇಖರ್ ಪಾಟೀಲ್ ಅವರಿಗೆ ಗೆ ಅತ್ಯಂತ ನಂಬಿಕಸ್ಥ. ಶಿವು ತನ್ನ ತಾಯಿ ಗಂಗಮ್ಮ