ರಾತ್ರಿ ಹನ್ನೆರಡು ಗಂಟೆ. ಆಸ್ಪತ್ರೆಯ ಶವಾಗಾರವು ನಿಶ್ಯಬ್ಧವಾಗಿತ್ತು. ಅಲ್ಲಲ್ಲಿ ಮಿನುಗುತ್ತಿದ್ದ ಟ್ಯೂಬ್ಲೈಟ್ಗಳ ಮಬ್ಬು ಬೆಳಕು ಸತ್ತವರ ಮೌನಕ್ಕೆ ಸಾಕ್ಷಿಯಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ಗೆ ಇದು ಹೊಸತೇನೂ ಆಗಿರಲಿಲ್ಲ. ಅವನೊಬ್ಬ ಅರೆವೈದ್ಯಕೀಯ ಸಿಬ್ಬಂದಿ. ಆಸ್ಪತ್ರೆಯಲ್ಲಿ ಯಾವ ಸಾವಿಗೂ ಅವನು ಅಂಜುತ್ತಿರಲಿಲ್ಲ. ಮನುಷ್ಯನ ಸಾವೆಂದರೆ ಅವನಿಗೆ ಕೇವಲ ಒಂದು ದೈಹಿಕ ಪ್ರಕ್ರಿಯೆ ಅಷ್ಟೇ.ಆ ರಾತ್ರಿ ಒಂದು ವಿಚಿತ್ರ ದೇಹ ಬಂದಿತ್ತು. ಮಧು ಎಂಬ ಯುವತಿಯ ದೇಹ. ಮಧು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಾವಿಗೆ ಕಾರಣ ಪ್ರೀತಿಸುತ್ತಿದ್ದ ಹುಡುಗ ಕೈಕೊಟ್ಟಿದ್ದು. ಅವಳ ದೇಹವನ್ನು ಫ್ರೀಜರ್ನಲ್ಲಿ ಇರಿಸುವಾಗ ಅಂಬರೀಶ್ಗೆ ವಿಚಿತ್ರವಾದ ಅಸಹ್ಯಕರ ದುರ್ವಾಸನೆ ಬಂದಿತ್ತು. ಅದೆಂತಹ ಆತ್ಮಹತ್ಯೆ? ಅಷ್ಟರಲ್ಲಿ ಅವನ ಮೊಬೈಲ್ ರಿಂಗ್ ಆಯಿತು. ಸ್ನೇಹಿತ ಹರೀಶ್ನ ಕರೆ. ಅಂಬಿ, ಇವತ್ತು ನನ್ನ ಬರ್ತ್ಡೇ ಪಾರ್ಟಿ ಇದೆ. ಬಾ, ಎಂದ. ಅಂಬರೀಶ್ಗೆ ಮಧುಳ ದೇಹವನ್ನು ರಾತ್ರಿ ಪೂರ್ತಿ ಕಾಪಾಡುವುದು ದೊಡ್ಡ ಕೆಲಸವಾಗಿರಲಿಲ್ಲ. ಪಾರ್ಟಿ ಮುಗಿಸಿ ವಾಪಸ್ ಬರುವಾಗ ಬೆಳಗಿನ ಜಾವ ಎರಡು ಗಂಟೆ. ಅಂಬರೀಶ್ ಆಸ್ಪತ್ರೆಯ