ಲಾಜಿಕ್ vs ಮ್ಯಾಜಿಕ್ (ಶೂನ್ಯಪುರದ ರಹಸ್ಯ)

  • 318
  • 120

ಮಂಜಿನ ಹೊದಿಕೆಯೊಳಗೆ ಅಡಗಿದ್ದ ಶೂನ್ಯಪುರ ಒಂದು ವಿಚಿತ್ರ ಹಳ್ಳಿ. ಅಲ್ಲಿನ ಜನರಿಗೆ ವಿಜ್ಞಾನದ ಮಾತುಗಳಿಗಿಂತ 'ಮಾಯಾವಿ ಮೃತ್ಯುಂಜಯನ ಪವಾಡಗಳೇ ವೇದವಾಕ್ಯ. ಮೃತ್ಯುಂಜಯ ಕೇವಲ ಗಾಳಿಯಲ್ಲಿ ಕೈಯಾಡಿಸಿ ಭಕ್ತರ ಕಾಯಿಲೆ ಗುಣಪಡಿಸುತ್ತಿದ್ದ, ಶೂನ್ಯದಿಂದ ಬಂಗಾರದ ನಾಣ್ಯಗಳನ್ನು ಸೃಷ್ಟಿಸುತ್ತಿದ್ದ. ಅವನ ಮಾತು ಎಂದರೆ ಅಲ್ಲಿ ಸಾಕ್ಷಾತ್ ಈಶ್ವರನ ಅಪ್ಪಣೆ ಎಂದೇ ಅರ್ಥ. ಅದೇ ಸಮಯದಲ್ಲಿ, ಮುಂಬೈನಿಂದ ಅನ್ವೇಷ ಎಂಬ ತರುಣ ವಿಜ್ಞಾನಿ ಆ ಹಳ್ಳಿಗೆ ಬಂದನು. ಅನ್ವೇಷನಿಗೆ ಪ್ರತಿಯೊಂದು ಘಟನೆಯ ಹಿಂದೆ ಒಂದು  ಲಾಜಿಕ್ ಇರಲೇಬೇಕು ಎಂಬ ಹಠ. ಅವನಿಗೆ ಈ ಮ್ಯಾಜಿಕ್ ಎಂಬುದು ಕೇವಲ ಜನರ ದೌರ್ಬಲ್ಯವನ್ನು ಬಳಸಿಕೊಳ್ಳುವ ಒಂದು ವ್ಯವಸ್ಥಿತ ಮೋಸ ಎಂದು ಅನಿಸುತ್ತಿತ್ತು. ಅನ್ವೇಷ ಹಳ್ಳಿಗೆ ಕಾಲಿಟ್ಟಾಗಲೇ ಘೋಷಿಸಿದ ನಾನು ಈ ಹಳ್ಳಿಯ ಜನರ ಕಣ್ಣು ಮುಚ್ಚಿರುವ ಸುಳ್ಳು ಮಾಯೆಯನ್ನು ಬಯಲು ಮಾಡುತ್ತೇನೆ. ಒಂದು ಸಂಜೆ, ಮೃತ್ಯುಂಜಯ ತನ್ನ ಭಕ್ತರ ಮುಂದೆ ದೊಡ್ಡದೊಂದು ಪವಾಡ ಪ್ರದರ್ಶಿಸಲು ಸಿದ್ಧನಾಗಿದ್ದ. ಇಂದು ನಾನು ಪ್ರಕೃತಿಯ ನಿಯಮವನ್ನೇ ಮೀರಿ, ತರ್ಕವನ್ನು ಸೋಲಿಸಿ ತೋರಿಸುತ್ತೇನೆ ಎಂದು ಗಂಭೀರವಾಗಿ