ಅಭಿನಯನಾ - 22

  • 60

   ಅಭಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಅದ ಮೇಲೆ, ಅವನ ಮನಸ್ಸಿಗೆ ಒಂದು ರೀತಿ ಸಮಾಧಾನ ನೆಮ್ಮದಿ ಸಿಕ್ಕ ಹಾಗೇ ಆಯಿತು. ನಯನಾ ಅವನ ಮನಸನ್ನ ಇಷ್ಟು ಅರ್ಥ ಮಾಡಿಕೊಂಡು ಇರೋದನ್ನ ನೋಡಿ ಅವಳ ಮೇಲೆ ಮತ್ತಷ್ಟು ಗೌರವ, ಪ್ರೀತಿ ಜಾಸ್ತಿ ಆಯಿತು. ನಯನಾ ಗೆ ಅಭಿ ಮನಸಲ್ಲಿ ಅವಳ ಮೇಲೆ ಎಷ್ಟು ಪ್ರೀತಿ ಇತ್ತು ಅದನ್ನ ಯಾಕೆ ಹೇಳಿಕೊಳ್ಳೋಕೆ ಆಗಲಿಲ್ಲ ಅಂತ ಗೊತ್ತಾದಾಗ, ಅವನ ಮನಸಲ್ಲಿ ಇದ್ದಾ ನೋವು, ಅದಕ್ಕೆ ಕಾರಣ ಆಗಿದ್ದ ವಿಷಯ ಕೇಳಿ ಅವಳ ಮನಸ್ಸಿಗೂ ತುಂಬಾ ನೋವಾಯಿತು. ಅದೇ ಸಮಯಕ್ಕೆ ಅವಳ ಮೇಲೆ ಅವನಿಗೆ ಇದ್ದಾ ಪ್ರೀತಿ ನ ನೋಡಿ ಮನಸ್ಸಿಗೆ ತುಂಬಾ ಸಂತೋಷ ಖುಷಿ ಆಯಿತು.   ಅಭಿ ನೆಮ್ಮದಿಯಾಗಿ ಬೆಡ್ ಮೇಲೆ ಕಣ್ ಮುಚ್ಚಿಕೊಂಡು ಮಲಗಿರ್ತಾನೆ. ನಯನಾ ಕುಡಿಯುವ ನೀರಿನ ಬಾಟಲ್ ನ ತೆಗೆದುಕೊಂಡು ರೂಮ್ ಡೋರ್ ಲಾಕ್ ಮಾಡಿ  ವಾಟರ್ ಬಾಟೆಲ್ ನ ಟೇಬಲ್ ಮೇಲೆ ಇಟ್ಟು, ಅಭಿ ಪಕ್ಕ