ಕಲ್ಪನೆಗೆ ಕೊನೆ ಎಲ್ಲಿದೆ?

  • 138
  • 57

ಮಹಾನಗರದ ನಿದ್ರೆಯಿಲ್ಲದ ಬೀದಿಗಳಲ್ಲಿ ಕಣ್ಣು ಮಿಟುಕಿಸುವ ನಿಯಾನ್ ದೀಪಗಳ ಮಧ್ಯೆ, 'ಡ್ರೀಮ್‌ವೇವರ್ ಲ್ಯಾಬ್ಸ್' ಎಂಬ ಒಂದು ಸಣ್ಣ ಆದರೆ ವಿಸ್ಮಯಕಾರಿ ಸಂಸ್ಥೆಯಿತ್ತು. ಅಲ್ಲಿ ಡಾ. ಸಿದ್ಧಾರ್ಥ್ ಮತ್ತು ಅವರ ಸಂಶೋಧನಾ ತಂಡ ಮಾನವನ ಕಲ್ಪನೆಯನ್ನು ವಾಸ್ತವಕ್ಕೆ ತರುವ ಸಂಕಲ್ಪ ಎಂಬ ಯೋಜನೆಯಲ್ಲಿ ನಿರತರಾಗಿದ್ದರು. ಸಿದ್ಧಾರ್ಥ್ ಒಬ್ಬ ಜೀನಿಯಸ್. ಅವರ ನಂಬಿಕೆಯೇನೆಂದರೆ  ಕಲ್ಪನೆಗೆ ಕೊನೆಯಿಲ್ಲ ಹಾಗೆಯೇ ಅದನ್ನು ವಾಸ್ತವವಾಗಿಸುವ ವಿಜ್ಞಾನಕ್ಕೂ ಕೊನೆಯಿರಬಾರದು. ಅವರ ಯೋಜನೆ ಸಂಕಲ್ಪ ಕೇವಲ ಒಂದು ಕನಸನ್ನು ನನಸು ಮಾಡುವ ಯಂತ್ರವಾಗಿರಲಿಲ್ಲ, ಬದಲಿಗೆ ಮಾನವನ ಅತ್ಯಂತ ಸೂಕ್ಷ್ಮ ಕಲ್ಪನೆಗಳನ್ನು ಗುರುತಿಸಿ, ಅದನ್ನು 3D ಮುದ್ರಣದ ಮೂಲಕ ಭೌತಿಕ ವಸ್ತುವಾಗಿ ಪರಿವರ್ತಿಸುವ ತಂತ್ರಜ್ಞಾನವಾಗಿತ್ತು.ಅನೇಕ ವರ್ಷಗಳ ಸಂಶೋಧನೆ ನೂರಾರು ಪ್ರಯೋಗಗಳ ನಂತರ ಒಂದು ದಿನ ಸಂಕಲ್ಪ ಯಶಸ್ವಿಯಾಯಿತು. ಸಿದ್ಧಾರ್ಥ್ ತಮ್ಮ ಮನಸ್ಸಿನಲ್ಲಿ ಒಂದು ಸೇಬನ್ನು ಕಲ್ಪಿಸಿಕೊಂಡರು  ಕೆಂಪು, ಹೊಳೆಯುವ, ರಸಭರಿತ ಸೇಬು. ಕ್ಷಣಾರ್ಧದಲ್ಲಿ ಯಂತ್ರದ ಒಳಗಿಂದ ಅದೇ ಸೇಬು ಹೊರಬಂತು. ಅದು ಕೇವಲ ಚಿತ್ರವಾಗಿರಲಿಲ್ಲ, ಸ್ಪಷ್ಟವಾಗಿ ಕಲ್ಪಿಸಿಕೊಂಡು, ಹುಟ್ಟಿಕೊಂಡ ಒಂದು ನೈಜ ಸೇಬು.