ಅಭಿನಯನಾ - 21

   ಅಭಿ ಗೋಸ್ಕರ ಕಾಯ್ತಾ ಕೂತ್ಕೊಂಡು ಇದ್ದಾ ನಯನಾ ಹಾಗೇ ಸೋಫಾ ಮೇಲೆ ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಿ ಬಿಡ್ತಾಳೆ. ಕೆಲವು ಸಮಯದ ನಂತರ ಹೊರಗಡೆ ಬೈಕ್ ಬಂದ ಸದ್ದು ಕೇಳಿ ನಯನಾ ಗೆ ಎಚ್ಚರಿಕೆ ಆಗುತ್ತೆ, ಅಲ್ಲಿಂದ ಎದ್ದು ಮೇನ್ ಡೋರ್ ಓಪನ್ ಮಾಡಿಕೊಂಡು ಹೊರಗಡೆ ನೋಡ್ತಾಳೆ.  ಅಭಿ ಬೈಕ್ ಸ್ಟಾಂಡ್ ಹಾಕಿ ಬೈಕ್ ನ ನೋಡ್ತಾ, ತುಂಬಾ ಥ್ಯಾಂಕ್ಸ್ ಗೆಳೆಯ, ನೀನು ನನ್ನ ಲೈಫ್ ಗೆ ಬಂದಮೇಲೆ, ನನ್ನ ಕಷ್ಟ, ನೋವು, ಸಂತೋಷ, ಕಣ್ಣೀರು ಎಲ್ಲಾ ಸಮಯದಲ್ಲಿ ನನ್ನ ಜೊತೆಗೆ ಇದ್ದೆ. ಅದಕ್ಕೆ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ. ನಯನಾ ಅಭಿ ಮಾತಾಡೋ ರೀತಿ ನೋಡಿ ಡ್ರಿಂಕ್ಸ್ ಮಾಡಿದ್ದಾನೆ ಅಂತ ಅರ್ಥ ಆಗುತ್ತೆ, ಬಟ್ ಬೈಕ್ ಜೊತೆಗೆ ಮಾತಾಡೋದನ್ನ ಕೇಳಿ, ಅವನನ್ನ ಡಿಸ್ಟರ್ಬ್ ಮಾಡದೇ ಕೇಳ್ತಾ ನಿಂತು ಬಿಡ್ತಾಳೆ, ಯಾಕಂದ್ರೆ ಅಭಿ ಇದುವರೆಗೂ ಅವನ ಮನಸಲ್ಲಿ ಇರೋ ಯಾವ ಒಂದು ವಿಷಯ ನ ಕೂಡ ಮನಸ್ಸು ಬಿಚ್ಚಿ ಮಾತಾಡೋಕೆ ಹೋಗಲಿಲ್ಲ.