ಸಾಹಸದ ಹಸಿವು ಇರುವ ದುರಹಂಕಾರಿವರುಣ್, ತನ್ನ 28 ನೇ ವಯಸ್ಸಿನಲ್ಲಿ, ಇಂಟರ್ನೆಟ್ ಜಗತ್ತಿನಲ್ಲಿ ಒಂದು ಬ್ರ್ಯಾಂಡ್. ಅವನ ಅಡ್ವೆಂಚರ್ ಬ್ಲಾಗ್'ಗೆ ಲಕ್ಷಾಂತರ ಫಾಲೋವರ್ಸ್. ಪ್ರಪಂಚದ ಅತ್ಯಂತ ಅಪಾಯಕಾರಿ, ನಿಗೂಢ ತಾಣಗಳಲ್ಲಿ ವಿಡಿಯೋ ಮಾಡುವುದೆಂದರೆ ಅವನಿಗೆ ಹುಚ್ಚು. ನಿಜವಾದ ಅಡ್ರಿನಾಲಿನ್ ರಶ್ ಅಂದ್ರೆ ಅದು ಸಾವಿನ ಅಂಚಿನಲ್ಲಿ ನಿಂತು ಬದುಕುವುದು ಎನ್ನುವುದು ಅವನ ಧ್ಯೇಯವಾಕ್ಯವಾಗಿತ್ತು. ಅವನ ಈ ಅತಿಯಾದ ಆತ್ಮವಿಶ್ವಾಸ ಮತ್ತು ಸಾಹಸದ ಹಸಿವೇ ಅವನನ್ನು ಪಶ್ಚಿಮ ಘಟ್ಟದ ಆಳದಲ್ಲಿರುವ, ಸ್ಥಳೀಯರು ಸತ್ತವರ ಕಣಿವೆ ಎಂದು ಕರೆಯುತ್ತಿದ್ದ ಕರಾಳ ಭೂಮಿಗೆ ಎಳೆದುಕೊಂಡು ಬಂದಿತ್ತು. ಪಶ್ಚಿಮ ಘಟ್ಟದ ಬುಡದಲ್ಲಿದ್ದ ಒಂದು ಸಣ್ಣ ಹಳ್ಳಿಯ ಮುಖಂಡ, ಬಿಳಿ ಗಡ್ಡದ ಗಂಗಯ್ಯ, ಅವನಿಗೆ ಎಚ್ಚರಿಸಿದ್ದ, ಯುವಕ, ಆ ಕಡೆ ಕಾಡಿಗೆ ಹೋಗಬೇಡ. ಅಲ್ಲಿಗೆ ಹೋದವರು ಯಾರೂ ಮರಳಿ ಬಂದಿಲ್ಲ. ಅಲ್ಲಿ ಕೇವಲ ಕಾಡು ಪ್ರಾಣಿಗಳಲ್ಲ, ಅದಕ್ಕಿಂತ ಕೆಟ್ಟ ಶಕ್ತಿಗಳು ವಾಸಿಸುತ್ತಿವೆ. ವರುಣ್ ನಗುತ್ತಾ, ಗಂಗಯ್ಯ ತಾತ, ನಿಮ್ಮ ಕಥೆಗಳೆಲ್ಲಾ ಇತಿಹಾಸ. ನಾನು ಆಧುನಿಕ ಮನುಷ್ಯ, ನನಗೆ ಯಾವುದಕ್ಕೂ