ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ - ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ಅಥವಾ ಈ ಕಲಿಯುಗದಲ್ಲಿ ಅಥವಾ ಭಾರತದಲ್ಲಿ ಪ್ರಾಮಾಣಿಕತೆ ಒಂದು ಶಾಪವೇ?ಇನ್ನೇನು, ಸರಿಯಾಗಿ ಒಂದು ವರ್ಷದ ಹಿಂದೆ ನಮ್ಮನ್ನಗಲಿದ, ಬದುಕಿನುದ್ದಕ್ಕೂ ಸತ್ಯ ಮತ್ತು ಧರ್ಮಕ್ಕಾಗಿ ಹೋರಾಡಿ ತ್ಯಾಗಮಯ ಜೀವನ ನಡೆಸಿದ ದುರಂತ ಉದ್ಯಮಿ ಬಿ.ಎಸ್. ಷಡಾಕ್ಷರಿ ಸ್ವಾಮಿ ಅವರ ದುರಂತ ಬದುಕು ಹೇಳುತ್ತೇನೆ ಕೇಳಿ...ಇದು ಕೇವಲ ಒಬ್ಬ ಇಂಜಿನಿಯರ್‌ನ ಜೀವನ ಕಥೆಯಲ್ಲ, ಬದಲಿಗೆ ಸಮಕಾಲೀನ ಸಮಾಜದಲ್ಲಿ ನೆಲೆಗೊಂಡಿರುವ ಭ್ರಷ್ಟಾಚಾರದ ಮಡುವಿನಲ್ಲಿ ನಿಷ್ಠುರ ಪ್ರಾಮಾಣಿಕತೆ ಹೇಗೆ ನಲುಗುತ್ತದೆ ಎಂಬುದಕ್ಕೆ ಒಂದು ಜೀವಂತ ಸಾಕ್ಷಿ.ಬಾಲ್ಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಬಿಟ್ಟಸಂದ್ರ ಪುಟ್ಟೇಗೌಡ ಪಾಳ್ಯದಲ್ಲಿ ಶರಣ ದಂಪತಿಗಳಾದ ಶ್ರೀ ಸದಾಶಿವಯ್ಯ ಮತ್ತು ಶ್ರೀಮತಿ ಶರಣೆ ಗಂಗಮ್ಮ ಅವರ ೯ ನೆ ಮಗುವಾಗಿ ೭ ನೆ ಸುಪುತ್ರ ರಾಗಿ ಜನಿಸಿದರು...ತುಂಬು ಕುಟುಂಬ ಮನೆ ತುಂಬ ಮಕ್ಕಳು ಬಡತನ...ನವೆಂಬರ್ ೧೦ ೧೯೬೧ ರಾತ್ರಿ ಕಾರ್ಮೋಡ ದ