ಕಾಂಟ್ಯಾಕ್ಟ್ ಮ್ಯಾರೇಜ್ - ಭಾಗ 2

  • 240
  • 1
  • 99

ಅವಳು ಸಹಿ ಮಾಡಿ ಕೊಟ್ಟ ಪೇಪರ್‌ಗಳನ್ನು ಸೇಫ್‌ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್‌ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ಆಘಾತದಿಂದ ಕಣ್ಣುಗಳನ್ನು ದೊಡ್ಡದು ಮಾಡಿಕೊಂಡು ಕೈಯಲ್ಲಿದ್ದ ಪೇಪರ್‌ಗಳನ್ನು ನೆಲಕ್ಕೆ ಎಸೆದು ಬಿಟ್ಟನು...ಪೇಪರ್‌ಗಳು ನೆಲಕ್ಕೆ ಬಿದ್ದ ಮುಂದಿನ ಕ್ಷಣ.ಸೌರಾಬ್ ಕಣ್ಣುಗಳು ಕೆಂಡದಂತಾಗಿ... ಉಕ್ಕಿ ಹರಿಯುತ್ತಿರುವ ಅಗ್ನಿ ಜ್ವಾಲೆಗಳೊಂದಿಗೆ.. ಎರಡೇ ಹೆಜ್ಜೆಗಳಲ್ಲಿ ಅವಳನ್ನು ಸಮೀಪಿಸಿ...ಆ ಹುಡುಗಿಯ ಮುಖವನ್ನು ತೀವ್ರವಾಗಿ ನೋಡುತ್ತಾ.. ನಿನ್ನ ಹೆಸರೇನು..?? ಗಂಭೀರವಾಗಿ ಕೇಳಿದನು... ಆ ನೋಟದಲ್ಲಿನ ಜ್ವಾಲೆಗಳು ಅವಳನ್ನು ಸುಟ್ಟು ಭಸ್ಮ ಮಾಡುವಂತಿತ್ತು... ಒಂದು ಕ್ಷಣ ಆ ಧ್ವನಿಯಲ್ಲಿನ ಗಾಂಭೀರ್ಯಕ್ಕೆ, ಆವೇಶದಲ್ಲಿದ್ದ ಚಿರತೆಗೆ ಸಿಕ್ಕ ಜಿಂಕೆ ಮರಿಯಂತಾಯಿತು ಅವಳ ಸ್ಥಿತಿ...ನಿನ್ನನ್ನೇ... ನಿನ್ನ ಹೆಸರೇನು.??? ಮತ್ತೆ ಕೇಳಿದನು...ಯಾಕೆ ಅಷ್ಟು ಕೋಪವಾಗಿದ್ದಾನೆಂದು ಗೊತ್ತಿಲ್ಲ.. ಇದ್ದಕ್ಕಿದ್ದಂತೆ ಹೆಸರು ಕೇಳುತ್ತಿದ್ದರೆ... ಭಯದಿಂದ... ತಾನು ಏನು ಮಾಡಿದೆ ಎಂದು ಯೋಚಿಸಿದಳು...ಆ ಕ್ಷಣ ಅವಳಿಗಿದ್ದ ಟೆನ್ಷನ್‌ನಿಂದ ತಾನು ಮಾಡಿದ ತಪ್ಪು ಅವಳಿಗೆ ನೆನಪಾಗಲಿಲ್ಲ... ನಡುಗುವ ಧ್ವನಿಯಿಂದ..ಅಪೇಕ್ಷಾ ಅಂದಳು..ಆದರೆ ಅವಳಿಗೆ ಗೊತ್ತಿರಲಿಲ್ಲ.ಅವನು ಅವಳ ಭಯವನ್ನು..