ಅಭಿನಯನಾ - 15

  ಬೆಳಿಗ್ಗೆ ಅಲಾರಾಂ ಸದ್ದಿಗೆ ನಯನಾ ಗೆ ಎಚ್ಚರ ಆಯಿತು. ಕಣ್ ಬಿಟ್ಟು ನೋಡ್ತಾಳೆ, ಅನಾ ಅಭಿ ಎದೆಮೇಲೆ ಆರಾಮಾಗಿ ಅಪ್ಪಿಕೊಂಡು ಮಲಗಿರ್ತಾಳೆ. ಅಭಿ ಅವಳನ್ನ ಬೀಳದಂತೆ ಹಿಡಿದುಕೊಂಡು ಮಲಗಿರೋದನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ. ಎದ್ದು ಮಗಳ ಕೆನ್ನೆಗೆ ಮುತ್ತು ಕೊಡೋಣ ಅಂತ ಹೋಗ್ತಾಳೆ. ಯಾರೋ ಇಡಿದುಕೊಂಡ ಫೀಲ್ ಆಗುತ್ತೆ. ನಯನಾ ಗೆ ಅದು ಅಭಿ ಅಂತ ಗೊತ್ತಾದಾಗ ಅವಳ ಮನಸ್ಸಿಗೆ ಹೇಳದಿರೋ ಅಷ್ಟು ಸಂತೋಷ, ಆನಂದ ಆಗುತ್ತೆ. ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಅಭಿ ಮುಖ ನಾ ನೋಡ್ತಾಳೆ. ಪ್ರಶಾಂತವಾಗಿ ಅಭಿ ಮಲಗಿರೋದನ್ನ ನೋಡಿ. ಅವನ ಮುಖ ನೋಡ್ತಾ ಮನಸಲ್ಲೇ, ಈ ರೀತಿ ಪ್ರೀತಿ ಕೊಡ್ತೀಯಾ ಅಂತ ಮೊದಲೇ ಗೊತ್ತಿದ್ರೆ ನಿನ್ನ ಇಷ್ಟು ದೂರ ಇಡ್ತಾನೆ ಇರಲಿಲ್ಲ. ನಿನಗೆ ನೋವು ಕೊಟ್ರು ದೂರ ಇಟ್ರು ಕೋಪ ಮಾಡ್ಕೊಂಡ್ರು. ಅದ್ಯಾವುದನ್ನು ಮನಸಲ್ಲಿ ಇಟ್ಟುಕೊಳ್ಳದೆ ನಮ್ಮ ಮೇಲೆ ಇಷ್ಟು ಪ್ರೀತಿ ನಾ ಇಟ್ಕೊಂಡು ಇದ್ದಿಯಾ. ಅಪ್ಪ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು