ಶಿಲಾಬಾಲಿಕೆ

  • 477
  • 1
  • 174

ಹಾಸನ ಜಿಲ್ಲೆಯ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಹಗಲಿನಲ್ಲಿ ಪ್ರವಾಸಿಗರ ಸ್ವರ್ಗ. ಆದರೆ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿದ್ದಂತೆ, ಅಲ್ಲಿನ ಕಲ್ಲುಗಳು ಬೇರೆಯದೇ ಕಥೆ ಹೇಳುತ್ತವೆ. ಇತಿಹಾಸ ಸಂಶೋಧಕ ಆದಿತ್ಯನಿಗೆ ಈ ದೇವಾಲಯದ ಬಗ್ಗೆ ಒಂದು ವಿಚಿತ್ರ ಆಕರ್ಷಣೆ. ಅವನು ಕೇವಲ ಪ್ರವಾಸಿಗರಂತೆ ಶಿಲ್ಪಗಳನ್ನು ನೋಡುವುದಿಲ್ಲ ಅವನು ಶಿಲ್ಪಗಳ ಕಣ್ಣುಗಳಲ್ಲಿ ಅಡಗಿರುವ ಕೋಡ್ (ಸಂಕೇತ) ಹುಡುಕುತ್ತಿರುತ್ತಾನೆ.ಅವನ ಬಳಿ ಅಜ್ಜನ ಕಾಲದ ಒಂದು ಹಳೆಯ ಡೈರಿ ಇತ್ತು. ಅದರಲ್ಲಿ ಬರೆದಿತ್ತು ದ್ವಾರಸಮುದ್ರದ ಮಹಾದ್ವಾರದ ಉತ್ತರಕ್ಕೆ ಇರುವ ಹದಿಮೂರನೇ ಶಿಲಾಬಾಲಿಕೆ ಕೇವಲ ಸುಂದರಿಯಲ್ಲ, ಅವಳು ಒಂದು ಮರಣದಂಡನೆಯ ದಾರಿ. ಈ ವಾಕ್ಯದ ಅರ್ಥ ಹುಡುಕುತ್ತಾ ಆದಿತ್ಯ ಅಲ್ಲಿಗೆ ಬಂದಿದ್ದ.ಅಂದು ಅಮಾವಾಸ್ಯೆ ಹತ್ತಿರವಿತ್ತು. ಆದಿತ್ಯ ತನ್ನ ವಿಶೇಷ ಇನ್ಫ್ರಾರೆಡ್' ಸ್ಕ್ಯಾನರ್ ಹಿಡಿದು ದೇವಾಲಯದ ಹೊರಗೋಡೆಯ ಹತ್ತಿರ ಹೋದ. ಅಲ್ಲಿ ಸಾಲಾಗಿ ನಿಂತಿದ್ದ ಶಿಲಾಬಾಲಿಕೆಯರಲ್ಲಿ ಒಂದು ವಿಗ್ರಹ ವಿಭಿನ್ನವಾಗಿತ್ತು. ಅವಳನ್ನು ಎಲ್ಲರೂ 'ದರ್ಪಣ ಸುಂದರಿ' ಎನ್ನುತ್ತಿದ್ದರು. ಅವಳು ಕೈಯಲ್ಲಿ ಕನ್ನಡಿ ಹಿಡಿದು ತನ್ನ ಸೌಂದರ್ಯ ನೋಡಿಕೊಳ್ಳುವಂತೆ ಕೆತ್ತಲಾಗಿತ್ತು. ಆದರೆ