ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆ ಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ಅಹಂಕಾರಿ ನೋಟದ ಯುವಕನೊಬ್ಬ, ಪ್ರತಿ ನಿಮಿಷವೂ ತನ್ನ ಎಡಗೈಯಲ್ಲಿದ್ದ ವಾಚ್‌ನಲ್ಲಿ ಸಮಯ ನೋಡುತ್ತಿದ್ದ.ವಾಚ್‌ನಲ್ಲಿ ಸಮಯ 10 ಗಂಟೆ ದಾಟಿ ಮುಂದೆ ಹೋಗುತ್ತಿದ್ದಂತೆ, ಅವನ ಕೋಪವೂ ಹೆಚ್ಚಾಗುತ್ತಿತ್ತು.ಈಗಾಗಲೇ ಮಾಸ್ಕ್‌ನಿಂದ ಮುಚ್ಚಿದ್ದ ಮುಖ, ಗುರುತು ಸಿಗದಷ್ಟು ಸಿಟ್ಟಿನಿಂದ ಕೆಂಪಗಾಗಿತ್ತು. ಕಣ್ಣುಗಳಿಗೆ ಹಾಕಿದ್ದ ಗಾಗಲ್ಸ್ ತೆಗೆದು, ಕೋಪದಿಂದ ಹಲ್ಲು ಕಚ್ಚಿ, ಎದುರಿನ ಸ್ಟೀರಿಂಗ್ ಮೇಲೆ ಜೋರಾಗಿ ಗುದ್ದಿದ. ಅವನ , ಬಾಯಿಂದ ಬರುತ್ತಿದ್ದ ಬೈಗುಳಗಳ ಪ್ರವಾಹವನ್ನು ತುಟಿಗಳುನುಡಿಯುತ್ತಿತು ಹೇಳುತ್ತಿದ್ದವು.ಕೆಂಡದಂತಹ ಕೆಂಪು ಕಣ್ಣುಗಳು ಅವನ ಕೋಪದ ಮಟ್ಟವನ್ನು ತಿಳಿಸುತ್ತಿದ್ದವು.ವೇಗವಾಗಿ ಹೊರಬರುತ್ತಿದ್ದ ಅವನ ಉಸಿರಾಟ, ಅವನಲ್ಲಿ ಆವೇಶ ಎಷ್ಟು ಹೆಚ್ಚಾಗಿದೆ ಎಂದು ಹೇಳುತ್ತಿತ್ತು.ಮತ್ತೆ ಸಮಯ ನೋಡಿದ. 10 ಗಂಟೆ ಹತ್ತು ನಿಮಿಷಕ್ಕೆ ಹತ್ತಿರವಾಗುತ್ತಿತ್ತು.ತಕ್ಷಣ ಫೋನ್ ತೆಗೆದು ಯಾರಿಗೋ ಕರೆ ಮಾಡಿದ. ಆ ಕಡೆಯಿಂದ ಅವರು ಫೋನ್ ಎತ್ತುತ್ತಿದ್ದಂತೆ, ಅವನ ಬೈಗುಳದ ಪ್ರವಾಹದಲ್ಲಿ