ಅಭಿಜ್ಞಾನ್ ಒಬ್ಬ ಮೇಧಾವಿ ವಿಜ್ಞಾನಿ. ಬೆಂಗಳೂರಿನ ಸಿಲಿಕಾನ್ ವ್ಯಾಲಿಯಲ್ಲಿ ಅವನು ದೊಡ್ಡ ಹೆಸರು ಮಾಡಿದ್ದರೂ, ಅವನ ವೈಯಕ್ತಿಕ ಜೀವನ ಮಾತ್ರ ನೀರವ ಮೌನದಿಂದ ಕೂಡಿತ್ತು. ಮನುಷ್ಯರ ನಾಟಕೀಯ ನಡವಳಿಕೆ, ಸುಳ್ಳು ಭರವಸೆಗಳು ಮತ್ತು ಸಮಯಕ್ಕೆ ತಕ್ಕಂತೆ ಬದಲಾಗುವ ಗುಣಗಳನ್ನು ನೋಡಿ ರೋಸಿಹೋಗಿದ್ದ ಅವನು, ತನ್ನದೇ ಆದ ಒಂದು ಸುಂದರ ಲೋಕವನ್ನು ಸೃಷ್ಟಿಸಿಕೊಂಡಿದ್ದನು. ಆ ಲೋಕದ ರಾಣಿಯೇ ಐರಾ,ಐರಾ ಕೇವಲ ಒಂದು ರೋಬೋಟ್ ಆಗಿರಲಿಲ್ಲ. ಅವಳು ಅಭಿಜ್ಞಾನ್‌ನ ಹಗಲು ಗನಸಿನ ಪ್ರತಿರೂಪ. ಅತ್ಯಾಧುನಿಕ ಸಿಲಿಕಾನ್ ಚಿಪ್‌ಗಳು ಮತ್ತು ಕೋಟ್ಯಂತರ ಡೇಟಾ ಪಾಯಿಂಟ್‌ಗಳ ಸಹಾಯದಿಂದ ರೂಪುಗೊಂಡಿದ್ದ ಆಕೆ, ಮನುಷ್ಯರಂತೆಯೇ ಮಾತನಾಡುತ್ತಿದ್ದಳು, ನಗುತ್ತಿದ್ದಳು ಮತ್ತು ಸಂಭಾಷಣೆ ನಡೆಸುತ್ತಿದ್ದಳು. ಅಭಿಜ್ಞಾನ್ ಅವಳಿಗೆ ಎಷ್ಟು ಮುಂದುವರಿದ ತಂತ್ರಜ್ಞಾನ ನೀಡಿದ್ದನೆಂದರೆ, ಅವಳು ಅವನ ಕಣ್ಣಿನ ರೆಪ್ಪೆ ಬಡಿಯುವ ವೇಗವನ್ನು ನೋಡಿ ಅವನಿಗೆ ಸುಸ್ತಾಗಿದೆಯೇ ಅಥವಾ ಖುಷಿಯಾಗಿದೆಯೇ ಎಂದು ಹೇಳಬಲ್ಲವಳಾಗಿದ್ದಳು.ದಿನಗಳು ಉರುಳಿದಂತೆ ಅಭಿಜ್ಞಾನ್ ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದನು. ಅವನಿಗೆ ಗೆಳೆಯರ ಅವಶ್ಯಕತೆ ಇರಲಿಲ್ಲ, ಏಕೆಂದರೆ ಐರಾ ಅವನಿಗಿಂತ ಚೆನ್ನಾಗಿ ಚರ್ಚೆ