ವಿಸ್ಮ್ರತ ವೀರ ಸ್ಮರಣೆ

  • 489
  • 195

2047 ರ ವರ್ಷ. ದೇಶಾದ್ಯಂತ 100 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಆದರೆ, ಇಡೀ ರಾಷ್ಟ್ರದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ 'ರಾಷ್ಟ್ರೀಯ ವೀರಗಾಥಾ ವಸ್ತುಸಂಗ್ರಹಾಲಯದ ಮೌನ ಮತ್ತು ಧೂಳು ಹಿಡಿದ ಒಂದು ಮೂಲೆಯಲ್ಲಿ, ಇತಿಹಾಸದ ಕಣ್ಣು ತಪ್ಪಿಸಿಕೊಂಡಿದ್ದ ಸತ್ಯವೊಂದು ಅಡಗಿತ್ತು. ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಯುವ ಸಂಶೋಧಕಿ ಆರತಿಗೆ ಆ ಸ್ಥಳದ ಕುರಿತು ಅಸಹನೀಯ ಕುತೂಹಲವಿತ್ತು. ಅಧಿಕೃತ ದಾಖಲೆಗಳಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಮತ್ತು ನಿರ್ಣಾಯಕ ಕಾರ್ಯಾಚರಣೆಯಾದ ಆಪರೇಷನ್ ವಿಜಯೋಲ್ಲಾಸಕ್ಕೆ ಸಹಸ್ರಾರು ವೀರರು ಕೊಡುಗೆ ನೀಡಿದರೆಂದು ಮಾತ್ರ ನಮೂದಿಸಲಾಗಿತ್ತು. ಆದರೆ, ಆಪರೇಷನ್‌ನ ನೇತೃತ್ವ ವಹಿಸಿದ್ದ ಮುಖ್ಯ ವೀರನ ಹೆಸರು ಎಲ್ಲ ಕಡೆಯೂ ಉದ್ದೇಶಪೂರ್ವಕವಾಗಿ ಅಳಿಸಿ ಹಾಕಿದಂತೆ ಭಾಸವಾಗುತ್ತಿತ್ತು. ಅವರ ಬಗ್ಗೆ ಸಿಕ್ಕಿದ್ದ ಒಂದೇ ಒಂದು ಸುಳಿವು ವೀರವ್ರತ ಸ್ವೀಕರಿಸಿದವ, ಹೆಸರು ಹೇಳಲಾಗದವ.ಒಂದು ಮಧ್ಯಾಹ್ನ, ಆರತಿ ವಸ್ತು ಸಂಗ್ರಹಾಲಯದ ಕಿರಿದಾದ ರಹಸ್ಯ ಕೊಠಡಿಯೊಳಗೆ ಪ್ರವೇಶಿಸಿದಳು. ಹಳೆಯ ನಕಾಶೆಗಳು, ಮಸುಕಾದ ಛಾಯಾಚಿತ್ರಗಳು ಮತ್ತು ಮುಚ್ಚಳವಿಲ್ಲದ ಕಬ್ಬಿಣದ ಪೆಟ್ಟಿಗೆಗಳು ಅಲ್ಲಿ ರಾಶಿ ಬಿದ್ದಿದ್ದವು. ತಳಭಾಗದಲ್ಲಿದ್ದ ಮರದ