ಊರಿಗೆ ಬಂದರು, ಸಮೃದ್ಧಿ ತಂದರು (ಪ್ರೇರಣಾತ್ಮಕ ಕಥೆ)ಲೇಖಕ ವಾಮನಾಚಾರ್ಯಮಾಲೂರುಬೆಳಗಲಿ ಗ್ರಾಮದಲ್ಲಿ ಸೂರ್ಯೋದಯ ಸಮಯ ಏಳು ಗಂಟೆ. ಅದೇ ಸಮಯದಲ್ಲಿ ಮೂವರು ಯುವತಿ ಯರು ಗ್ರಾಮದ ಹೊರಗೆ ಇರುವ ಹಳೆಯ ಬಾವಿಯ ಮುಂದೆ ನೀರು ಸೇದಲು ಕೊಡಗಳನ್ನು ತಂದರು. ಇದು ಯುವತಿಯರ ಮೊದಲ ಭೇಟಿ. ಕಮಲಾ, ರೇಖಾ ಹಾಗೂ ವಂದನಾ ಎಂದು ಪರಿಚಯ ಮಾಡಿ ಕೊಂಡರು. ಉತ್ತರ ಕರ್ನಾಟಕದ ಪವನಪುರದ ಕಮಲಾ ಒಂದು ವಾರದ ಹಿಂದೆ ಸಾಹುಕಾರ ಭಾಲಚಂದ್ರ ಅವರ ಪುತ್ರ ಶಶಾಂಕ್ ಜೊತೆಗೆ ಮದುವೆ ಆದಳು. ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದ ರೇಖಾ, ಗ್ರಾಮದ ಪ್ರಮುಖ ಕುಳ ಶಿವಾನಂದ ಅವರ ಪುತ್ರ ಸದಾನಂದ ನನ್ನು ಮದುವೆ ಆಗಿ ಕೇವಲ ಹದಿನೈದು ದಿವಸ ಆಗಿತ್ತು. ಮಹಾರಾಷ್ಟ್ರದ ಸೋಲಾಪುರ ನಗರದ ವಂದನಾ, ತಾನು ಓದುತ್ತಿದ್ದ ಕಾಲೇಜ್ ನಲ್ಲಿ ಕ್ಲಾರ್ಕ್ ಎಂದು ಕೆಲಸ ಮಾಡುತ್ತಿದ್ದ ಮನೋಹರ್ ಅವರನ್ನು ಪ್ರೇಮಿಸಿ ಮದುವೆ ಆಗಿ ಹತ್ತು ದಿವಸ. ಇದೇ ಗ್ರಾಮದ ನಿವೃತ್ತ ಶಿಕ್ಷಕ ಮುಕುಂದರಾವ್ ಅವರ ಮಗ ಮನೋಹರ್. ಆಶ್ಚರ್ಯವೆಂದರೆ ಎಲ್ಲರೂ