ಆ ಊರಿನ ರೈಲ್ವೇ ಸ್ಟೇಷನ್ ಎದುರಿಗಿನ ಅಶ್ವತ್ಥ ಮರ ಕೇವಲ ಒಂದು ಮರವಲ್ಲ ಅದು ಗಿರಿಯನ ಸಾಮ್ರಾಜ್ಯ. ಸುಮಾರು ನಲವತ್ತು ವರ್ಷದ ಗಿರಿಯ, ಕಂಕುಳಲ್ಲಿ ಹಳೆಯ ಪತ್ರಿಕೆಗಳ ಕಂತೆ, ಕೈಯಲ್ಲೊಂದು ಮುರಿದ ಮರದ ಕೋಲು ಹಿಡಿದು ಅಲೆದಾಡುತ್ತಿದ್ದ. ಮೈಮೇಲೆ ಬಟ್ಟೆಗಳಿಗಿಂತ ತೇಪೆಗಳೇ ಹೆಚ್ಚು. ಆದರೆ ಅವನ ಮುಖದ ಮೇಲಿನ ಆ ನಗು' ಮಾತ್ರ ಸದಾ ಹೊಸದು. ಆ ನಗು ಕೆಲವೊಮ್ಮೆ ಸಣ್ಣ ಮುಗುಳ್ನಗೆಯಾಗಿದ್ದರೆ, ಇನ್ನು ಕೆಲವೊಮ್ಮೆ ಇಡೀ ಸ್ಟೇಷನ್ ಪ್ರತಿಧ್ವನಿಸುವಂತಹ ಅಟ್ಟಹಾಸವಾಗಿರುತ್ತಿತ್ತು.ಊರಿನ ಜನರಿಗೆ ಗಿರಿಯ ಒಂದು 'ಮನೋರಂಜನೆ ಮಕ್ಕಳು ಅವನ ಮೇಲೆ ಕಲ್ಲು ತೂರುತ್ತಿದ್ದರು, ದೊಡ್ಡವರು ಅವನನ್ನು ಕಂಡು ಮರುಕ ಪಡುತ್ತಿದ್ದರು. ಆದರೆ ಯಾರಿಗೂ ತಿಳಿಯದ ವಿಷಯವೆಂದರೆ, ಗಿರಿಯ ಆ ಊರಿನ ಪ್ರತಿಯೊಬ್ಬನ ಗುಟ್ಟನ್ನು ತನ್ನ ನಗುವಿನೊಳಗೆ ಬಚ್ಚಿಟ್ಟುಕೊಂಡಿದ್ದ.ಒಮ್ಮೆ ಊರಿನ ದೊಡ್ಡ ವಿದ್ವಾಂಸರೊಬ್ಬರು ವೇದ-ಪುರಾಣಗಳ ಬಗ್ಗೆ ಭರ್ಜರಿ ಉಪನ್ಯಾಸ ನೀಡಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಸುತ್ತಲೂ ಜನ ಸೇರಿ ಅವರ ಜ್ಞಾನವನ್ನು ಹೊಗಳುತ್ತಿದ್ದರು. ಗಿರಿಯ ಅಲ್ಲಿಗೆ ಬಂದು ಆ ವಿದ್ವಾಂಸರ