ಬೆಳ್ಳಿಗೆ ಮಗಳ ಮುದ್ದು ಮುದ್ದು ಮಾತಿಗೆ ಅಭಿ ಗೆ ಎಚ್ಚರ ಆಗುತ್ತೆ. ಅಭಿ ಕಣ್ ಬಿಟ್ಟು ನೋಡ್ತಾನೆ ಅನಾ ಮೊಬೈಲ್ ಅಲ್ಲಿ ಯಾರ್ ಜೊತೇನೋ ಮಾತಾಡ್ತಾ ಇರ್ತಾಳೆ. ಅಭಿ ಎದ್ದು ಅನಾ ಗೆ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ. ಅನಾ ಮೊಬೈಲ್ ಅಲ್ಲಿ ಮಾತಾಡೋದನ್ನ ನಿಲ್ಲಿಸಿ, ಅಭಿ ಕಡೆಗೆ ನೋಡ್ತಾ ಗುಡ್ ಮಾರ್ನಿಂಗ್ ಪಪ್ಪಾ ಅಂತ ಹೇಳಿ ಹತ್ತಿರ ಬಂದು ತಬ್ಬಿಕೊಂಡು, ಕೆನ್ನೆಗೆ ಮುತ್ತನ್ನ ಕೊಟ್ಟು, ಮತ್ತೆ ಮೊಬೈಲ್ ನಾ ಕಿವಿಗೆ ಇಟ್ಕೊಂಡು ಅ ಅಜ್ಜಿ ಹೇಳಿ ಅಂತ ಹೇಳ್ತಾಳೆ. ಅಭಿ ಅನಾ ಗೆ ಯಾರು ಅಂತ ಕೇಳ್ತಾನೆ. ಅನಾ ಯಾರೋ ಗೊತ್ತಿಲ್ಲ ಪಪ್ಪಾ ನಿನ್ನ ಮೊಬೈಲ್ ಗೆ ಕಾಲ್ ಬರ್ತಾ ನೇ ಇತ್ತು, ನಿನ್ ಮಲಗಿದ್ದೆ, ಅದಕ್ಕೆ ನಾನೆ ಪಿಕ್ ಮಾಡಿ ಮಾತಾಡ್ತಾ ಇದ್ದೀನಿ. ಯಾರೋ ಅಜ್ಜಿ ನಿನ್ನ ಹೆಸರು ಕೇಳಿದ್ರು, ಪಪ್ಪಾ ಮಲಗಿದ್ದಾರೆ ಅಂತ ಹೇಳಿದೆ. ನಿನ್ ಯಾರು ಅಂತ ಕೇಳಿದ್ರು ನಿಮ್ಮ ಮಗಳು ಅಂತ