ಅಭಿನಯನಾ - 10

  • 237
  • 93

.......  ನಯನಾ ಅಭಿ ಗೆ ತಿಂಡಿ ಮಾಡಿಕೊಂಡು ಮಗಳನ್ನ ಕರ್ಕೊಂಡು ರೂಮ್ ಒಳಗೆ ಬರ್ತಾಳೆ. ತಿಂಡಿ ಪ್ಲೇಟ್ ನಾ ಟೇಬಲ್ ಮೇಲೆ ಇಟ್ಟು ಅಭಿ ಪಕ್ಕ ಕೂತು, ಅಭಿ ಅಂತ ಅವನನ್ನ ಮುಟ್ಟಿ ಕರೀತಾಳೆ. ಅಭಿ ಕಣ್ ಬಿಟ್ಟು ನೋಡ್ತಾನೆ ನಯನಾ ಪಕ್ಕದಲ್ಲಿ ಕೂತ್ಕೊಂಡು ಇರ್ತಾಳೆ. ನಯನಾ,,, ತಿಂಡಿ ಮಾಡ್ಕೊಂಡು ಬಂದಿದ್ದೀನಿ ಎದ್ದೇಳಿ ತಿಂಡಿ ಮಾಡಿ ಮತ್ತೆ ರೆಸ್ಟ್ ಮಾಡೀವಿರಂತೆ.ಅಭಿ,,, ನನಗೆ ಏನು ಬೇಡ ನೀವು ಹೋಗಿ.ನಯನಾ,,, ಹಾಗೇ ಹೇಳಿದ್ರೆ ಹೇಗೆ ಬೆಳ್ಳಿಗೆ ಯಿಂದ ಏನು ತಿಂದಿಲ್ಲ ಸ್ವಲ್ಪ ತಿಂಡಿ ತಿನ್ನಿ ಇಲ್ಲಾ ಅಂದ್ರೆ ಇನ್ನು ಸುಸ್ತಾಗುತ್ತೆ ಎದ್ದೇಳಿ ಅಂತ ಅಭಿ ನಾ ಇಡಿದು ಎಬ್ಬಿಸಿ ಕೂರಿಸಿ. ಅನಾ ಕಡೆಗೆ ನೋಡಿ ಅನಾ ಅಡುಗೆ ಮನೇಲಿ ಬಿಸಿ ನೀರು ಇಟ್ಟಿದ್ದೀನಿ ಅಜ್ಜಿ ಗೆ ಹೇಳಿ ತಗೋ ಬಾ ಹೋಗು ಪಪ್ಪಾ ಗೆ ಅಂತ ಹೇಳ್ತಾಳೆ. ಅನಾ ಆಯ್ತು ಅಮ್ಮ ಅಂತ ಅಲ್ಲಿಂದ ಹೋಗ್ತಾಳೆ. ನಯನಾ ಕೈಗೆ ತಿಂಡಿ ಪ್ಲೇಟ್ ನಾ ಇಡಿದುಕೊಂಡು ಅಭಿ ಗೆ