ಅಭಿ ಬಗ್ಗೆ ತಿಳಿದೇ ತಪ್ಪಾಗಿ ಮಾತಾಡಿದೆ ಅಂತ ಅಪ್ಪನ ಹತ್ತಿರ ಕ್ಷಮೆ ಕೇಳಿ. ಅಪ್ಪನನ್ನ ಕರ್ಕೊಂಡು ಊಟಕ್ಕೆ ಬರ್ತಾಳೆ. ಅಪ್ಪ ಅಮ್ಮ ನಯನಾ ಮೂರು ಜನ ಊಟ ಮಾಡಿದ ಮೇಲೆ. ನಯನಾ ರೂಮ್ ಗೆ ಬಂದು ಬೆಡ್ ಮೇಲೆ ಮಲಗಿಕೊಂಡು ಕಣ್ ಮುಚ್ಚಿಕೊಂಡು ಅಪ್ಪ ಅಭಿ ಬಗ್ಗೆ ಹೇಳಿದರ ಬಗ್ಗೆ ಯೋಚ್ನೆ ಮಾಡ್ತಾ ಇರ್ತಾಳೆ. ಸ್ವಲ್ಪ ಸಮಯದ ನಂತರ ಯಾರೋ ರೂಮ್ ಡೋರ್ ಓಪನ್ ಮಾಡಿಕೊಂಡು ಬಂದ ಹಾಗೇ ಅನ್ನಿಸುತ್ತೆ. ನಯನಾ ಯೋಚ್ನೆ ಯಿಂದ ಹೊರಗೆ ಬಂದು ಕಣ್ ಬಿಟ್ಟು ನೋಡ್ತಾಳೆ ರೂಮ್ ಒಳಗೆ ಅಮ್ಮ ಬರೋದನ್ನ ನೋಡಿ ಏನಾಯ್ತಮ್ಮ ಅಂತ ಎದ್ದು ನಿಲ್ಲೋಕೆ ಹೋಗ್ತಾಳೆ. ಸುಭದ್ರ,,,,ಏನಿಲ್ಲಾ ಮಾತಾಡೋಣ ಅಂತ ಬಂದೆ ಕುತ್ಕೋ ಅಂತ ಹೇಳಿ ಮಗಳನ್ನ ಕೂರಿಸಿ ಪಕ್ಕದಲ್ಲಿ ಕೂತ್ಕೋತಾರೆ.ನಯನಾ,,, ಅಮ್ಮನ ನೋಡ್ತಾ ಏನ್ ಹೇಳು ಅಮ್ಮ.ಸುಭದ್ರ,,, ನಯನಾ ನಾ ನೋಡ್ತಾ, ಅವಳ ಕೈ ಇಡಿದು ಕೊಂಡು. ನಿಮ್ಮಪ್ಪ ಹೇಳಿದ ಮೇಲೇನೆ ನನಗೆ ಗೊತ್ತಾಗಿದ್ದು ಅವರ ಪ್ರಾಣ ಉಳಿಸಿದ್ದು