ಅಧ್ಯಾಯ 18: ಕೃಷ್ಣ vs ಕಾಳಿಂಗ

  • 42

ಸೈಬರ್ ಸೂತ್ರಧಾರನ ಪತನ,ಸೂತ್ರಧಾರನ ರಹಸ್ಯ ನೆಲೆ, ಮರುದಿನ ಬೆಳಿಗ್ಗೆ 10:00 AMಕೃಷ್ಣನು ಕಾಳಿಂಗನಿಂದ ರಹಸ್ಯವಾಗಿ ಪಡೆದ ಮಾಹಿತಿಯ ಆಧಾರದ ಮೇಲೆ, ಸೈಬರ್ ಸೂತ್ರಧಾರನ ನಿಜವಾದ ಗುರುತನ್ನು ಪತ್ತೆ ಹಚ್ಚಿರುತ್ತಾನೆ: ಆತ ಬೇರಾರೂ ಅಲ್ಲ, ನಗರದ ಪ್ರಭಾವಿ ಟೆಕ್ ವಿಶ್ಲೇಷಕ ಮತ್ತು ತೇಜಸ್ ಜೈನ್‌ನ ಹಿಂದಿನ ಪಾಲುದಾರ 'ಸಮರ್ಥ್ ರಾವ್.ಸಮರ್ಥ್ ರಾವ್‌ನ ರಹಸ್ಯ ನೆಲೆ ಒಂದು ಹಳೆಯ, ಕೈಬಿಟ್ಟಿರುವ ರೇಡಿಯೋ ಪ್ರಸಾರ ಕೇಂದ್ರದಲ್ಲಿರುತ್ತದೆ. ಇಲ್ಲಿಂದಲೇ ಆತನು ತನ್ನ ಸೈಬರ್ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿರುತ್ತಾನೆ. ಕೃಷ್ಣನು ರವಿಗೆ ಪ್ರಸಾರ ಕೇಂದ್ರವನ್ನು ಸುತ್ತುವರಿಯಲು ಆದೇಶಿಸಿ, ತಾನು ಏಕಾಂಗಿಯಾಗಿ ಒಳಗೆ ನುಗ್ಗಲು ನಿರ್ಧರಿಸುತ್ತಾನೆ.ಕೃಷ್ಣ: (ರಹಸ್ಯವಾಗಿ ರವಿಗೆ) ಗುಂಡು ಹಾರಿಸಬೇಡಿ ಇದು ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ. ಆತನನ್ನು ಜೀವಂತವಾಗಿ ಹಿಡಿಯಬೇಕು.ಕೃಷ್ಣನು ರೇಡಿಯೋ ಕೇಂದ್ರದ ಪ್ರಸಾರ ಕೋಣೆಗೆ ಪ್ರವೇಶಿಸಿದಾಗ, ಸಮರ್ಥ್ ರಾವ್ ದೊಡ್ಡ ಪರದೆಯ ಮುಂದೆ ಕುಳಿತು, ತನ್ನ ಕೊನೆಯ ದಾಳಿಯನ್ನು ಸಿದ್ಧಪಡಿಸುತ್ತಿರುತ್ತಾನೆ. ಆತನು ಕೃಷ್ಣನನ್ನು ನೋಡಿ ಶಾಂತವಾಗಿ ನಗುತ್ತಾನೆ.ಸಮರ್ಥ್ ರಾವ್ (ಸೈಬರ್ ಸೂತ್ರಧಾರ): ಬಂದೆಯಾ ACP ಕೃಷ್ಣ ಆ ಕ್ರೇಜಿ